ಅಳದಂಗಡಿ: ಶ್ರೀ ಸತ್ಯಸಾರ ಮುಪ್ಪಣ್ಯ ದೈವಸ್ಥಾನ ಕೋಟೆ ಬಾಗಿಲು ಇದರ 2025-26 ಮತ್ತು 2026-27ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯು ಶ್ರೀ ಸತ್ಯಸಾರ ಮುಪ್ಪಣ್ಯ ದೈವಸ್ಥಾನದ ಗೌರವ ಅಧ್ಯಕ್ಷ ಶಿವಪ್ರಸಾದ್ ಅಜಿಲರ ಅದ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ಸುರೇಶ್ ಕರಂಬಾರು ಬಂತಡ್ಕ, ಉಪಾಧ್ಯಕ್ಷರಾಗಿ ವಿನೋದ್, ಕಾರ್ಯದರ್ಶಿಯಾಗಿ ಜಯಾನಂದ್, ಜೊತೆ ಕಾರ್ಯದರ್ಶಿಯಾಗಿ ಮನೋಜ್, ಕೋಶಾಧಿಕಾರಿಯಾಗಿ ಪ್ರಶಾಂತ್, ಜೊತೆ ಕೋಶಾಧಿಕಾರಿಯಾಗಿ ಪ್ರಸಾದ್ ಬಿಕ್ಕಿರ, ಸಂಚಾಲಕರಾಗಿ ಕೃಷ್ಣ ಅರುವ, ಸಹ ಸಂಚಾಲಕರಾಗಿ ಪ್ರಕಾಶ್ ಎಮ್.,ಲೆಕ್ಕ ಪರಿಶೋಧಕರಾಗಿ ಶ್ರೀನಿವಾಸ್ ಎಂ. ಆಯ್ಕೆಯಾದರು.