Site icon Suddi Belthangady

ಫೇಸ್ ಬುಕ್ ನಲ್ಲಿ ಸೌಜನ್ಯ ಪರ ಹೋರಾಟಕ್ಕೆ ಸಂಬಂಧಿಸಿ ಅಶ್ಲೀಲ ಸಂದೇಶದ ಪೋಸ್ಟ್-ಪ್ರವೀಣ್ ಲೋಬೋ ಎಂಬ ಖಾತೆಯ ಬಗ್ಗೆ ದೂರು

ಬೆಳ್ತಂಗಡಿ: ಫೇಸ್ ಬುಕ್ ಖಾತೆಯಲ್ಲಿ ಸೌಜನ್ಯ ಪರ ಹೋರಾಟದ ಬಗ್ಗೆ ಆಶ್ಲೀಲ ಸಂದೇಶ ಪೋಸ್ಟ್ ಮಾಡಿದ್ದಾರೆಂದು ಆರೋಪಿಸಿ ಪ್ರವೀಣ್ ಲೋಬೋ ಎಂಬ ಖಾತೆಯ ವಿರುದ್ಧ ಕೌಕ್ರಾಡಿ ಗ್ರಾಮದ ಜಯಂತ್ ಟಿ ಎಂಬವರು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಡಬ, ಕೌಕ್ರಾಡಿ ಗ್ರಾಮದ ನಿವಾಸಿ ಜಯಂತ ಟಿ (46) ಎಂಬವರು ದಿನಾಂಕ:11-07-2025 ರಂದು ತನ್ನ ಪೇಸ್‌ ಬುಕ್‌ ಖಾತೆಯನ್ನು ಪರಿಶೀಲಿಸುತ್ತಿದ್ದಾಗ, ಪ್ರವೀಣ್‌ ಲೊಬೋ ಎಂಬ ಪೇಸ್ ಬುಕ್‌ ಖಾತೆಯಲ್ಲಿ ಸೌಜನ್ಯ ಪರ ಹೋರಾಟಕ್ಕೆ ಸಂಬಂಧಿಸಿದಂತೆ, ಅಶ್ಲೀಲ ಸಂದೇಶವಿರುವ ಪೋಸ್ಟ್‌ ಪ್ರಸಾರ ಮಾಡಿರುವುದು ಕಂಡುಬಂದಿರುತ್ತದೆ.

ಈ ಬಗ್ಗೆ ಜಯಂತ್ ನೀಡಿದ ದೂರಿನ ಮೇರೆಗೆ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ : 58/2025 ಕಲಂ: 296 ಬಿಎನ್‌ ಎಸ್‌ 2023 ರಂತೆ‌ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version