Site icon Suddi Belthangady

ಧರ್ಮಸ್ಥಳ ಮಾಜಿ ಗ್ರಾ.ಪಂ. ಅಧ್ಯಕ್ಷರ ಮನೆಯಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ:ಸುಟ್ಟು ಕರಕಲಾದ ಅಡುಗೆ ಮನೆ

ಧರ್ಮಸ್ಥಳ: ಗ್ರಾಮದ ನಾರ್ಯ ನಿವಾಸಿ ಮಾಜಿ ಗ್ರಾ.ಪಂ. ಅಧ್ಯಕ್ಷೆ ಗೀತಾದಾಮೋದರ್ ಆಚಾರ್ಯ ಮನೆಯಲ್ಲಿ ಆಕಸ್ಮಿಕವಾಗಿ ಗ್ಯಾಸ್‌ ಸೋರಿಕೆಯಾಗಿ ಅಡುಗೆ ಮನೆ ಸುಟ್ಟು ಹೋಗಿರುವ ಘಟನೆ ಜು .13ರಂದು ಮುಂಜಾನೆ ನಡೆದಿದೆ.

ಮನೆಯಲ್ಲಿ ಪೂಜಾ ಕಾರ್ಯಕ್ರಮ ಇದ್ದ ಕಾರಣ ಅನೇಕ ಕುಟುಂಬಸ್ಥರು ಪಾಲ್ಗೊಂಡಿದ್ದರು. ಇವರಿಗೆ ಬೆಳಗ್ಗಿನ ಉಪಹಾರ ತಿಂಡಿ ಮಾಡಲು ಅಡುಗೆ ಕೋಣೆಗೆ ತೆರಳಿ ಗ್ಯಾಸ್ ಪರಿಶೀಲಿಸಿ ನಂತರ ಅಡುಗೆ ಮಾಡಲು ಮುಂದಾದಾಗ ಆಕಸ್ಮಿಕವಾಗಿ ಗ್ಯಾಸ್ ಸಿಲಿಂಡರ್ ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಮನೆಯಲ್ಲಿ ಇದ್ದವರು ಗೋಣಿ ಮರಳು ಹಾಕಿದರು.

ಯಾವುದೇ ಪ್ರಯೋಜನವಾಗದೆ ಬೆಂಕಿ ಅಡುಗೆ ಕೋಣೆಗೆ ಆವರಿಸಿ ಅಡುಗೆ ಪರಿಕರಗಳು ಸುಟ್ಟು ಹೋಗಿದೆ. ಘಟನಾ ಸ್ಥಳಕ್ಕೆ ಗ್ರಾಂ. ಪಂ. ಸದಸ್ಯ ಸುಧಾಕರ್ ಭೇಟಿ ನೀಡಿದ್ದಾರೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಭೇಟಿ ನೀಡಿದ್ದಾರೆ.

Exit mobile version