Site icon Suddi Belthangady

ಕಡಿರುದ್ಯಾವರ: ಅಕ್ರಮ ಮರಳು ಸಾಗಾಟ: ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

ಕಡಿರುದ್ಯಾವರ: ಬೊಳ್ಳೂರು ಎಂಬಲ್ಲಿಯ ನೇತ್ರಾವತಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಪಿಕಪ್‌ನಲ್ಲಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಬೆಳ್ತಂಗಡಿ ಪೊಲೀಸರು ಪತ್ತೆ ಹಚ್ಚಿ ಪಿಕಪ್ ಹಾಗೂ ಮರಳು ಸಹಿತ ಸಾಮಾಗ್ರಿಗಳನ್ನು ವಶಪಡಿಸಿಕೊಂಡ ಪ್ರಕರಣ ಜು.11ರಂದು ವರದಿಯಾಗಿದೆ.

ಜು. 11 ರಂದು ಬೆಳ್ತಂಗಡಿ ಪೊಲೀಸ್ ಠಾಣಾ ಉಪ ನೀರಿಕ್ಷಕ ಯಲ್ಲಪ್ಪ ಹೆಚ್. ಮಾದರ ಅವರು ಸಿಬ್ಬಂದಿಗಳ ಜೊತೆಯಲ್ಲಿ ಕಡಿರುದ್ಯಾವರ ರಸ್ತೆಯಲ್ಲಿ ಬರುತ್ತಿರುವ ಸಮಯ ಕಡಿರುದ್ಯಾವರ ಗ್ರಾಮದ ಬೊಳ್ಳೂರು ಎಂಬಲ್ಲಿ ಪ್ರತೀಶ್ ಎಂಬಾತನು ಪಿಕಪ್ ವಾಹನದಲ್ಲಿ ಯಾವುದೇ ಪರವಾನಿಗೆ ಪಡೆಯದೆ ಅಕ್ರಮವಾಗಿ ಮರಳು ಕಳವು ಮಾಡಿಕೊಂಡು ಬರುತ್ತಿದ್ದುದನ್ನು ಪತ್ತೆಮಾಡಿದ್ದಾರೆ.

ಪ್ರತೀಶ್ ಸಾಗಾಟದ ಪಿಕಪ್ ವಾಹನ ಹಾಗೂ ಪಿಕಪ್ ವಾಹನದಲ್ಲಿದ್ದ ರೂ. 2ಸಾವಿರ ಮೌಲ್ಯದ ಮರಳು, 3 ಕಬ್ಬಿಣದ ಬಕೆಟ್, ಮರಳು ತೆಗೆಯಲು ಉಪಯೋಗಿಸಿದ 1 ಕಬ್ಬಿಣದ ಸ್ಟ್ಯಾಂಡ್, 2 ಪ್ಲಾಸ್ಟಿಕ್ ಬುಟ್ಟಿ ಹಾಗೂ 2 ಕಬ್ಬಿಣದ ಹಾರೆಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version