ಕಕ್ಯಪದವು: “ಇಂದಿನ ಮಕ್ಕಳೇ ನಾಳಿನ ಪ್ರಜೆಗಳು; ಅವರಿಗೆಲ್ಲ ಬೇಕು ನಾಯಕರು” ಎಂಬಂತೆ ಎಲ್.ಸಿ.ಆರ್. ವಿದ್ಯಾಸಂಸ್ಥೆಯ 2025-26ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನಾ ಹಾಗೂ ಪ್ರಮಾಣವಚನ ಕಾರ್ಯಕ್ರಮವನ್ನು ಜು.12ರ ಪೂರ್ವಾಹ್ನ 10 ಗಂಟೆಗೆ ಸರಿಯಾಗಿ ನೆರೆವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲ ಜೋಸ್ಟಾನ್ ಲೋಬೋ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕಿ ವಿಜಯ, ಸಂಸ್ಥೆಯ ಸಂಯೋಜಕ ಯಶವಂತ ಜಿ. ನಾಯಕ್ ಹಾಗೂ ಕಾರ್ಯಕ್ರಮದಲ್ಲಿ ದಿವ್ಯಶ್ರೀ ಮತ್ತು ಎಲ್ಲಾ ಶಿಕ್ಷಕ ವೃಂದ ಹಾಗೂ ಬೋಧಕೇತರ ವರ್ಗ ಉಪಸ್ಥಿತರಿದ್ದರು.
ಆಯ್ಕೆಯಾದ ಮಂತ್ರಿಮಂಡಲದ ಎಲ್ಲಾ ಸದಸ್ಯರುಗಳಿಗೆ ಬ್ಯಾಡ್ಜ್ ಗಳನ್ನು ವಿತರಿಸಿ, ಹೂಗುಚ್ಛಗಳನ್ನುನೀಡುವುದರ ಮೂಲಕ ಸಂಸ್ಥೆಯ ಪ್ರಾಂಶುಪಾಲ, ಸಂಯೋಜಕ ಹಾಗೂ ಮುಖ್ಯ ಶಿಕ್ಷಕಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಶಾಲಾ ನಾಯಕಿ 10ನೇ ತರಗತಿಯ ಮನಸ್ವಿನಿ, ಉಪನಾಯಕಿಯಾಗಿ 9ನೇ ತರಗತಿಯ ಅದಿತಿ ಎಂ. ಪ್ರಭು, ಶಿಕ್ಷಣ ಮಂತ್ರಿಗಳಾಗಿ ನವನೀತ್ ಮತ್ತು ಗೌತಮ್ ನಾಯಕ್, ಶಿಸ್ತಿನ ಹಾಗೂ ಆರೋಗ್ಯ ಮಂತ್ರಿಗಳಾಗಿ ಫಾತಿಮತ್ ಶೈಮ ಮತ್ತು ಸಾತ್ವಿಕ, ಕ್ರೀಡಾ ಮಂತ್ರಿಗಳಾಗಿ ಸಾನ್ವಿತ್ ಮತ್ತು ಚಿರಾಗ್, ಸಾಂಸ್ಕೃತಿಕ ಮಂತ್ರಿಗಳಾಗಿ ನಿಖಿಲ್ ಮತ್ತು ಚಿರಾಗ್ ಕೆ. ಎಸ್., ಗುಂಪಿನ ಪ್ರತಿನಿಧಿಗಳಾಗಿ ಪ್ರೀತಮ್, ಮೊಹಮ್ಮದ್ ಶಾಹಿಲ್, ಸಾನ್ವಿ ವೈ. ಅಂಚನ್ ಮತ್ತು ಸಮೀಕ್ಷಾ ಅವರಿಗೆ ಮುಖ್ಯ ಶಿಕ್ಷಕಿ ವಿಜಯ ಕೆ. ಅವರು ಪ್ರತಿಜ್ಞಾವಿಧಿಯನ್ನು ಬೋಧಿಸಿ ವಿದ್ಯಾರ್ಥಿಗಳಿಗೆ ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ಕಿವಿ ಮಾತನ್ನು ಹೇಳಿದರು.
ಶಾಲಾ ಪ್ರಾಂಶುಪಾಲ ಜೋಸ್ಟನ್ ಲೋಬೊ ಆಯ್ಕೆಯಾದ ಸಚಿವರಿಗೆ ಅಭಿನಂದನೆಗಳನ್ನು ತಿಳಿಸುತ್ತಾ, ಜವಾಬ್ದಾರಿ ಕೇವಲ ಒಂದೆರಡು ದಿನದ್ದಲ್ಲ ಇಡೀ ವರ್ಷ ನಿಭಾಯಿಸಬೇಕು. ಅವರ ಜೊತೆಗೆ ಎಲ್ಲಾ ವಿದ್ಯಾರ್ಥಿಗಳು ಸಹಕರಿಸಬೇಕೆಂದು ಹೇಳುತ್ತಾ, ಮಕ್ಕಳಲ್ಲಿ ಪ್ರಪ್ರಥಮವಾಗಿ ಸ್ವಶಿಸ್ತು ಎಂಬ ಮೌಲ್ಯ ಮೈಗೂಡಿರಬೇಕು ಎಂಬುದನ್ನು ತಿಳಿಸಿದರು.
ವಿದ್ಯಾರ್ಥಿಗಳಾದ ರಶ್ಮಿ ಆರ್. ಪೂಜಾರಿ ಸ್ವಾಗತಿಸಿ, ದೀಪ್ತಿ ಹಾಗೂ ತನ್ವಿ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮವು ಪ್ರತೀಕ್ಷ ಅವರ ವಂದನಾರ್ಪಣೆಯೊಂದಿಗೆ ಕೊನೆಗೊಂಡಿತು.