ಪಡಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ಮಹಾಸಭೆಯು ಜು.12ರಂದು ಸಂಘದ ಸಮೃದ್ಧಿ ಸಭಾಭವನದಲ್ಲಿ ನಡೆಯಿತು.ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅಂತೋನಿ ಫೆರ್ನಾಂಡಿಸ್ ವಹಿಸಿ ಸಂಘವು 186ಕೋಟಿ ವ್ಯವಹಾರ ನಡೆಸಿ 1ಕೋಟಿ 90ಸಾವಿರ ಲಾಭ ಗಳಿಸಿದೆ. ಸದಸ್ಯರಿಗೆ 15% ಡಿವಿಡೆಂಡ್ ಘೋಷಿಸಿದರು. ವರದಿ ಸಾಲಿನಲ್ಲಿ ಶೇ 100ಸಾಲ ಮರುಪಾವತಿ ಯಾಗಿದೆ. 27ಕೋಟಿ 11ಲಕ್ಷ ಠೇವಣಿ ಸಂಗ್ರಹವಾಗಿದೆ ಎಂದರು.
ಸಿಬ್ಬಂದಿ ಭದ್ರತಾ ಕೊಠಡಿಯನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು. ಮಹಾ ಸಭೆಯಲ್ಲಿ ಪಡಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಪೂಜಾರಿ, ಸಂಘದ ಮಾಜಿ ಅಧ್ಯಕ್ಷ ಯೋಗೇಶ ಕುಮಾರ ನಡಕರ,
ಸಂತೋಷ್ ಕುಮಾರ್ ಜೈನ್, ಪಡಂಗಡಿ ಗ್ರಾ.ಪಂ.ಮಾಜಿ ಅಧ್ಯಕ್ಷೆ ಮೀನಾಕ್ಷಿ, ಪಡಂಗಡಿ ಗ್ರಾಮ ಪಂಚಾಯತ್ ಸದಸ್ಯರು, ಪಡಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು, ಸದಸ್ಯರು, ಉಪಾಧ್ಯಕ್ಷ ನರೇಂದ್ರಕುಮಾರ್, ನಿರ್ದೇಶಕರಾದ ನಾರಾಯಣ ಮೂಲ್ಯ, ಸಂತೋಷ್ ಶೆಟ್ಟಿ, ರವಿ ಕುಮಾರ್, ರಾಮು, ಪದ್ಮನಾಭ ನಾಯ್ಕ್, ಕೃಷ್ಣಪ್ಪ ಪೂಜಾರಿ, ಉಮೇಶ್, ಉಷಾ, ಸುನಂದಾ, ನವೀನ್, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ: ಪ್ರಗತಿಪರ ಕೃಷಿಕ, ಕಂಬಳ ಓಟಗಾರ ಅಂಕರ್ಜಲ್ ಶ್ರೀನಿವಾಸ ಶೆಟ್ಟಿ ಅವರನ್ನು ಹಾಗೂ ಪಡಂಗಡಿ ಸರಕಾರಿ ಶಾಲೆ ಶೇ. 100% ಫಲಿತಾಂಶ ದಾಖಲಿಸಿದ ಶಾಲೆಗೆ, ಪಡಂಗಡಿ ಗ್ರಾಮ ವ್ಯಾಪ್ತಿಯ ಅತೀ ಹೆಚ್ಚು ಅಂಕ ಗಳಿಸಿದ ಶಾಲಾ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನ ನೀಡಿ ಪುರಸ್ಕರಿಸಲಾಯಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಕೇಶಿನಿ ಎ. ಮಹಾಸಭೆಯ ನೋಟಿಸ್ ಓದಿ, ವರದಿ ಮಂಡಿಸಿದರು. ನಿರ್ದೇಶಕಿ ಉಷಾ ಸ್ವಾಗತಿಸಿದರು. ಅಂಡಿಂಜೆ ಶಾಲಾ ನಿವೃತ್ತ ಶಿಕ್ಷಕ ಶಿವಶಂಕರ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಸುಜಯ, ಉಮೇಶ್, ಆನಂದ, ರಂಜಿತ್ ಸಹಕರಿಸಿದರು.