ಮಚ್ಚಿನ: ಜು.5ರಂದು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್ತಿನ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು. ಶಾಲಾ ಮುಖ್ಯಮಂತ್ರಿಯಾಗಿ ಆಯುಷ್ 8ನೇ ತರಗತಿ, ಉಪಮುಖ್ಯಮಂತ್ರಿಯಾಗಿ ರೋಹಿತ್ 8ನೇ ತರಗತಿ, ಕ್ರೀಡಾ ಮಂತ್ರಿಯಾಗಿ ಕೌಶಿಕ್ 8ನೇ ತರಗತಿ, ಗೃಹಮಂತ್ರಿಯಾಗಿ ಇಂಚರ 8ನೇ ತರಗತಿ, ಆಹಾರ ಮಂತ್ರಿ ಯಾಗಿ ತಕ್ಷಣ್ 8ನೇ ತರಗತಿ, ನೀರಾವರಿ ಮಂತ್ರಿಯಾಗಿ ಉಲ್ಲಾಸ್ 8ನೇ ತರಗತಿ ಕೃಷಿ ಮಂತ್ರಿಯಾಗಿ ರಿತೇಶ್ 8ನೇ ತರಗತಿ, ಸ್ವಚ್ಛತಾ ಮಂತ್ರಿಯಾಗಿ ಸಾನ್ವಿ ಪ್ರಭು 8ನೇ ತರಗತಿ, ಗ್ರಂಥಾಲಯ ಮಂತ್ರಿಯಾಗಿ ಹನೀಷಾ 8ನೇ ತರಗತಿ, ಆರೋಗ್ಯ ಮಂತ್ರಿಯಾಗಿ ಸ್ವಫೀನಾ 8ನೇ ತರಗತಿ, ಶಿಸ್ತುಮಂತ್ರಿಯಾಗಿ ವಂಶಿಕಾ 8ನೇ ತರಗತಿ ಶಿಕ್ಷಣ ಮಂತ್ರಿ ಯಾಗಿ ಅಲ್ಪಾನ 8ನೇ ತರಗತಿ, ಸ್ಪೀಕರ್ ಆಗಿ ಸಾನ್ವಿ 8ನೇ ತರಗತಿ ಇವರು ಪ್ರಮಾಣ ವಚನ ಸ್ವೀಕರಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಹಾಗೂ ಸದಸ್ಯರು ನೂತನ ಮಂತ್ರಿ ಮಂಡಲಕ್ಕೆ ಶುಭಹಾರೈಸಿದರು.
ಶಾಲಾ ಶಿಕ್ಷಕಿ ಅಶ್ವಿನಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಜಿಪಿಟಿ ಶಿಕ್ಷಕಿ ದಿವ್ಯಾ ಎಚ್.ಎ. ನಿರೂಪಿಸಿ, ಮಾರ್ಗದರ್ಶನ ನೀಡಿದರು. ಜಿಪಿಟಿ ಶಿಕ್ಷಕಿ ರಮಾದೇವಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ತುಳಸಿ ಧನ್ಯವಾದವಿತ್ತರು.