Site icon Suddi Belthangady

ಉಜಿರೆಯಲ್ಲಿ ಸುಗಂಧಿ ಸ್ ಗಲ್ಲಿ ಕಿಚನ್ ಹೋಟೆಲ್ ಉದ್ಘಾಟನೆ

ಉಜಿರೆ: ಕಾಲೇಜು ರಸ್ತೆಯ ಕಾಶಿ ಪ್ಯಾಲೇಸ್ ಬಳಿ ನೂತನವಾಗಿ ಆರಂಭಗೊಂಡ ‘ಸುಗಂಧಿ’ ಸ್ ಗಲ್ಲಿ ಕಿಚನ್’ ಹೋಟೆಲ್ ಉದ್ಘಾಟನಾ ಸಮಾರಂಭ ನಡೆಯಿತು. ಉಜಿರೆ ಪಂಚಾಯತ್ ಮಾಜಿ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ ಉದ್ಘಾಟನೆ ನೆರವೇರಿಸಿ, ಹೋಟೆಲ್ ಅಭಿವೃದ್ಧಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕಟ್ಟಡದ ಮಾಲಕರಾದ ನಝೀರ್, ಅಮರ್ ಶೆಟ್ಟಿ, ಕೇಶವ, ರಾಧಾಕೃಷ್ಣ, ಪೂರ್ಣಿಮಾ, ಮುಕುಂದ, ರಮೇಶ್, ಕಾವ್ಯ, ಸುಶ್ಮಿತಾ, ಬಾನುಕಿರಣ್, ಅಮಿತ್, ಮಂಜುನಾಥ್, ಲಲಿತ್ ಹಾಗೂ ಪ್ರಣವ್ ಪ್ರಮುಖ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಹೋಟೆಲ್ ಮಾಲಕರಾದ ಶರತ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು

Exit mobile version