ಮಡಂತ್ಯಾರು: ಜು.10ರಂದು ಗುರುಪೂರ್ಣಿಮೆಯಂದು, ಶ್ರೀ ವಿದ್ಯಾಸರಸ್ವತಿ ಭಜನಾ ಮಂಡಳಿ ಪಾರೆಂಕಿ, ಮಡಂತ್ಯಾರಿನ ಮಹಿಳಾ ತಂಡದ ಸದಸ್ಯರಿಂದ ಗುರುವಂದನಾ ಕಾರ್ಯಕ್ರಮವು ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆಯಿತು.
ಮಹಿಳಾ ತಂಡದ ಭಜನಾ ತರಬೇತು ಗುರು ಸತೀಶ್ ಪೂಂಜಾ ವಾಮದಪದವು ಅವರನ್ನು ಫಲಪುಷ್ಪ ಹಾಗೂ ಹೂಗುಚ್ಚೆ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ದೇವಸ್ಥಾನದ ಪ್ರದಾನ ಅರ್ಚಕ ಟಿ.ವಿ. ಶ್ರೀಧರ ರಾವ್ ಪೇಜಾವರ ಅವರು ಮತ್ತು ತಂಡದ ಸದಸ್ಯರು ಉಪಸ್ಥಿತರಿದ್ದರು.