Site icon Suddi Belthangady

ಬೆಳ್ತಂಗಡಿಯಲ್ಲಿ ಪೂಜಾ ಸಾಮಾಗ್ರಿಗಳ ಮಳಿಗೆ ಸಿಂಧೂರ ಟ್ರೇಡರ್ಸ್ ಶುಭಾರಂಭ

ಬೆಳ್ತಂಗಡಿ: ಅಯ್ಯಪ್ಪ ದೇವಸ್ಥಾನದ ಬಳಿ ರಾಮನಗರ ಶ್ರೀದೇವಿ ಕಾಂಪ್ಲೆಕ್ಸ್ ನಲ್ಲಿ ಪೂಜಾ ಸಾಮಾಗ್ರಿಗಳ ಮಳಿಗೆಯಾದ ಸಿಂಧೂರ ಟ್ರೇಡರ್ಸ್ ಜು. 11ರಂದು ಶುಭಾರಂಭಗೊಂಡಿತು. ಉದ್ಘಾಟನೆಯನ್ನು ಮಾಲಕರ ತಾಯಿ ಸುಶೀಲ ಓಬಯ್ಯ ಹೆಗ್ಡೆ ಮತ್ತು ಅತ್ತೆ ನಳಿನಿ ನೀಲಾಕ್ಷ ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಮಾಜಿ ಅಧ್ಯಕ್ಷ ನಾರಾಯಣ್ ಭಟ್ ಮುಗುಳಿ, ಶ್ರೀಧರ್ ಭಟ್ ಕುತ್ಹ್ಯಾರು, ಮಾಲಕ ಕೃಷ್ಣಕುಮಾರ್, ಶ್ರೀನಿವಾಸ್ ಹೆಗ್ಡೆ ಕರಂಬಾರು, ಸುಚಿತ್ರಾ, ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು. ಬಂದಂತಹ ಅತಿಥಿ ಗಣ್ಯರನ್ನು ಸತೀಶ್ ರಾಜ್ ಸ್ವಾಗತಿಸಿ, ವಂದಿಸಿದರು.

Exit mobile version