ಉಜಿರೆ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಸರೋಜ ಶೆಟ್ಟಿ ದಂಪತಿಯ 25ನೇ ವರ್ಷದ ವೈವಾಹಿಕ ಜೀವನದ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯು ಜು.10ರಂದು ಉಜಿರೆಯ ಕುಂಜರ್ಪದಲ್ಲಿ ನಡೆಯಿತು.
25ನೇ ವರ್ಷದ ವಿವಾಹ ವಾರ್ಷಿಕೋತ್ಸವದಲ್ಲಿ ತಮ್ಮಣ್ಣ ಶೆಟ್ಟಿ, ಪ್ರಸನ್ನ ರವಿ, ಜಯಂತ್ ಟಿ., ಗಿರೀಶ್ ಮಟ್ಟಣ್ಣವರ್, ಅನಿಲ್ ಕುಮಾರ್ ಅಂತರ, ಹರೀಶ್ ಕುಮಾರ್ ಬರೆಮೇಲು, ಮನೋಜ್ ಕುಂಜರ್ಪ, ಮನೆತನದ ನೂರಾರು ಸದಸ್ಯರು, ಮಕ್ಕಳು, ಸಹೋದರರು, ಕುಟುಂಬಸ್ಥರು, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿಗಳು, ಕಾರ್ಯಕರ್ತರುಗಳು ಎಲ್ಲರೂ ಒಟ್ಟಾಗಿ ಖುಷಿಯಿಂದ ಸಂಭ್ರಮಿಸಿದರು.
ಅಚ್ಚುಕಟ್ಟಾದ ವ್ಯವಸ್ಥೆ ಶುಚಿ-ರುಚಿಯಾದ ಊಟೋಪಚಾರ, ಸಂಗೀತ ರಸಮಂಜರಿ, ಸವಿ ನೆನಪುಗೋಸ್ಕರ ಕೊಡುಗೆ, ಗಣ್ಯರು, ಹಿತೈಷಿಗಳು, ಕಾರ್ಯಕರ್ತರುಗಳು, ಕುಟುಂಬಸ್ಥರು ಆಗಮಿಸಿ ದಂಪತಿಗಳಿಗೆ ಶುಭಕೋರಿದರು.