Site icon Suddi Belthangady

ಕೊಯ್ಯೂರು ಬಿಜೆಪಿ ಶಕ್ತಿ ಕೇಂದ್ರದ 157 ಬೂತ್ ಸಮಿತಿಯಿಂದ ಗುರುಪೂರ್ಣಿಮ ಕಾರ್ಯಕ್ರಮ

ಕೊಯ್ಯೂರು: ಭಾರತೀಯ ಜನತಾ ಪಕ್ಷದ ವತಿಯಿಂದ ಗುರು ಪೂರ್ಣಿಮೆಯ ಭಾಗವಾಗಿ ಕೊಯ್ಯೂರು ಗ್ರಾಮದ 157ನೇ ಬೂತ್ ನಲ್ಲಿ ಯಕ್ಷಗಾನ ಗುರುಗಳಾದ ವಿಶ್ವನಾಥ ಗೌಡ ಪಾಂಬೇಲು ಅವರಿಗೆ ಗುರುಪೂರ್ಣಿಮೆ ದಿನ ಗುರುವಂದನೆ ಕಾರ್ಯಕ್ರಮ ಜು.10ರಂದು ನಡೆಯಿತು.

ಮೊದಲ ಬಾರಿಗೆ 1986 ರಲ್ಲಿ ಧರ್ಮಸ್ಥಳದ ಲಲಿತಾ ಕಲಾಭವನದಲ್ಲಿ ಯಕ್ಷಗಾನ ಶಿಕ್ಷಣ ಪೂರ್ಣಗೊಳಿಸಿ, ನಂತರ 2004ರಿಂದ ಸ್ಥಳೀಯ ಶಾಲಾ ಮಕ್ಕಳಿಗೆ ಯಕ್ಷಗಾನವನ್ನು ಕಲಿಸುತ್ತಾ ತಮ್ಮ ಯಕ್ಷ ಸೇವೆಯನ್ನು ಪ್ರಾರಂಭಿಸಿದರು. 2018ರ ಕೊರೊನಾ ಮಹಾಮಾರಿಯವರೆಗೂ ಹಲವಾರು ಮಕ್ಕಳಿಗೆ ಯಕ್ಷ ಗುರುವಾಗಿ ಸೇವೆ ನೀಡುತ್ತಾ ಬಂದಿರುತ್ತಾರೆ. ಈ ಎಲ್ಲಾ ಸಂಗತಿಗಳನ್ನೂ ಮನಗೊಂಡು ಇವರು ಗುರು ಪೂರ್ಣಿಮೆಯ ದಿನದಂದು ಕಾರ್ಯಕರ್ತರ ಸಮ್ಮುಖದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಸಲಾಯಿತು.

ಕೊಯ್ಯೂರು ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರಾದ ತಾರಾನಾಥ ಗೌಡ ಮೇಗಿನಬಜಿಲ, ಗ್ರಾಮ ಪಂಚಾಯಿತ್ ಉಪಾಧ್ಯಕ್ಷ ಹರೀಶ್ ಗೌಡ ಬಜಿಲ, ಕೊಯ್ಯೂರು ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಪುರುಷೋತ್ತಮ ಡೆಂಬುಗ, ಕಾರ್ಯಕರ್ತರಾದ ಮೋಹನದಾಸ್ ಬಜಿಲ, ಶೇಖರ ಗೌಡ ಕೋರಿಯಾರು ಉಪಸ್ಥಿತರಿದ್ದರು. ದಾಮೋದರ ಗೌಡ ಬೆರ್ಕೆ ಅವರು ಪ್ರಾಸ್ತಾವಿಕ ಭಾಷಣದೊಂದಿಗೆ ಸ್ವಾಗತಿಸಿ, ಭರತ್ ಡೆಂಬುಗ ವಂದಿಸಿದರು.

Exit mobile version