Site icon Suddi Belthangady

ಕುಮಟಾ ಕೋನಳ್ಳಿ ದೇವಸ್ಥಾನದಲ್ಲಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತಾಚರಣೆ: ಸಚಿವ ಮಾಂಕಾಳ್ ಎಸ್. ವೈದ್ಯರಿಂದ ಉದ್ಘಾಟನೆ-ಬೆಳ್ತಂಗಡಿಯಿಂದ ಹಲವಾರು ಗಣ್ಯರು ಭಾಗಿ

ಧರ್ಮಸ್ಥಳ: ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ 1008 ಮಹಾಮಂಡಲೇಶ್ವರ ಬ್ರಹ್ಮಾನಂದ ಸರಸ್ವತಿಜೀ ಮಹಾರಾಜ್ ಅವರ 6ನೇ ವರ್ಷದ ಚಾರ್ತುಮಾಸ್ಯ ವೃತಾಚರಣೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಕೋನಳ್ಳಿ ಶ್ರೀ ವನದುರ್ಗಾ ದೇವಾಲಯದಲ್ಲಿ ಜು.10ರಿಂದ ಪ್ರಾರಂಭಗೊಂಡಿತು.

ಕರ್ನಾಟಕ ಸರಕಾರದ ಮೀನುಗಾರಿಕೆ, ಬಂದರು, ಒಳನಾಡು ಜಲ ಸಾರಿಗೆ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ಎಸ್. ವೈದ್ಯ ಉದ್ಘಾಟಿಸಿದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆ ವಹಿಸಿದ್ದರು. ಸ್ವಾಮೀಜಿ ಅವರು ಆಶೀರ್ವಚನಗೈದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಕುಮಟಾ ಶಾಸಕ ದಿನಕರ ಶೆಟ್ಟಿ, ಶಿರಸಿ ಶಾಸಕ ಭೀಮಣ್ಣ ಟಿ. ನಾಯ್ಕ, ಸೇರಿದಂತೆ ಹಲವಾರು ಮಾಜಿ ಶಾಸಕರು,ಮಾಜಿ ಸಂಸದರು, ಜನ ಪ್ರತಿ ನಿಧಿಗಳು, ಸ್ವಾಮೀಜಿಯವರ ಶಿಷ್ಯವೃಂದ, ಕುಮಟಾ,ಹೊನ್ನಾವರ ಚಾತುರ್ಮಸ್ಯ ವೃತಾಚರಣೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಉತ್ತರ ಕನ್ನಡ ಜಿಲ್ಲಾ ಎಲ್ಲಾ ತಾಲೂಕು ನಾಮಧಾರಿ ಸಂಘಗಳ ಮತ್ತು ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೊದಲು ಬೆಳಿಗ್ಗೆ ವನ ದುರ್ಗಾ ದೇವಾಲಯದಲ್ಲಿ ಚಾ ತುರ್ಮಸ್ಯ ವೃತ ಸಂಕಲ್ಪ ಪ್ರಯುಕ್ತ ರಾಮ ತಾರಕ ಮಂತ್ರ ಯಜ್ಞ, ವೈದಿಕ ವಿಧಿ ವಿಧಾನ ಗಳು, ಕುಮುಟಾ ನಾಮಧಾರಿ ಸಭಾ ಭವನದ ಆವರಣದಲ್ಲಿರುವ ಶ್ರೀ ವೆಂಕಟ್ರಮಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನದಿಂದ ಶ್ರೀ ಗಳ ಪುರ ಪ್ರವೇಶ ಭವ್ಯ ಮೆರವಣಿಗೆ ನಡೆಯಿತು. ನಂತರ ವನದುರ್ಗಾ ದೇವಿಗೆ ವಿಶೇಷ ಪೂಜೆ ನಡೆಯಿತು.

ಚಾತುರ್ಮಾಸ್ಯ ವೃತಾಚರಣೆ ಗುರು ಪೂರ್ಣಮೆಯ ದಿನವಾದ ಜು.10ರಿಂದ ಆ. 20ರವರೆಗೆ ಪ್ರತಿ ದಿನ ಭಜನೆ, ಗುರು ಪಾದುಕ ಪೂಜೆ, ಆಶೀರ್ವಚನ, ವಿವಿಧ ಧಾರ್ಮಿಕ, ಸಾಂಸ್ಕೃಕ, ಕಾರ್ಯಕ್ರಮಗಳು, ಯಕ್ಷಗಾನ ಪ್ರದರ್ಶನ ನಡೆಯಲಿದೆ.

Exit mobile version