ನಾರಾವಿ: ಜು.9ರಂದು ವಿವಿಧ ಶಾಲಾ ಸಂಘಗಳ ಉದ್ಘಾಟನೆಯು ನೆರವೇರಿತು. ಮಕ್ಕಳ ವಿವಿಧ ಪ್ರತಿಭೆಗಳು ಮತ್ತು ನಾಯಕತ್ವ ಗುಣಗಳನ್ನು ಉನ್ನತ ಮಟ್ಟಕ್ಕೇರಿಸುವ ಉದ್ದೇಶ ಹೊಂದಿರುವ ಈ ಕಾರ್ಯಕ್ರಮದಲ್ಲಿ ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸ್ವಾಮಿ ಜೆರೋಮ್ ಡಿಸೋಜಾ ಅವರು ಅಧ್ಯಕ್ಷತೆ ವಹಿಸಿದ್ದರು. ಸಂತ ಪಾವ್ಲರ ಆಂಗ್ಲ ಮಾದ್ಯಮ ಶಾಲೆಯ ಮುಖ್ಯ ಶಿಕ್ಷಕ ರಿಚರ್ಡ್ ಮೋರಾಸ್ ಹಾಗೂ ಸಂತ ಪಾವ್ಲರ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸೋಫಿಯಾ ಫೆರ್ನಾಂಡಿಸ್ ಅವರು ಮುಖ್ಯ ಅತಿಥಿಗಳಾಗಿದ್ದರು.
ವಿದ್ಯಾರ್ಥಿಗಳಿಂದ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಪ್ರತೀ ಸಂಘದ ವಿದ್ಯಾರ್ಥಿ ಅಧ್ಯಕ್ಷರು ವೇದಿಕೆಯನ್ನಲಂಕರಿಸಿದ್ದರು. ಪ್ರತೀ ಸಂಘದಿಂದ ಸಂಘದ ಪರಿಚಯ ಮತ್ತು ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.
ವಿದ್ಯಾರ್ಥಿ ಸಿಂಚನ ಎಚ್. ಸ್ವಾಗತಿಸಿದರು. ಜೀವಲ್ ಪಾಯ್ಸ್ ಕಾರ್ಯಕ್ರಮ ನಿರ್ವಹಿಸಿದರು. ನಿಖಿಲ್ ಶೆಟ್ಟಿ ವಂದಿಸಿದರು.