ಬೆಳ್ತಂಗಡಿ: ಪುದುವೆಟ್ಟು ಶೌರ್ಯ ಸ್ವಯಂ ಸೇವಕರ ಕಾಳಜಿಯಿಂದ ಪುದುವೆಟ್ಟುನಿಂದ ಪದವುವರೆಗೆ ಸಂಪೂರ್ಣವಾಗಿ ಹಾಳಾಗಿದ್ದ ಮುಖ್ಯ ರಸ್ತೆ ದುರಸ್ತಿಗೊಂಡಿದೆ.
ಈ ರಸ್ತೆ ಹೊಂಡಗಳಿಂದ ಹಾನಿಗೊಳಗಾಗಿದ್ದು ವಾಹನ ಸವಾರರು, ಸಾರ್ವಜನಿಕರು ಈ ರಸ್ತೆಯಲ್ಲಿ ಸಾಗಲು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಮನಗಂಡ ಪುದುವೆಟ್ಟು ಶೌರ್ಯ ಸ್ವಯಂ ಸೇವಕರು ಗ್ರಾಮ ಪಂಚಾಯತ್ ಅಧ್ಯಕ್ಷ ಪೂರ್ಣಾಕ್ಷ ಅವರ ಗಮನಕ್ಕೆ ತಂದು ದುರಸ್ತಿ ಕಾರ್ಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ರಸ್ತೆಗೆ ಪಿಲಿಕಲ ಕೋರೆಯವರು ಕಲ್ಲಿನ ಹುಡಿ ನೀಡಿ ಸಹಕರಿಸಿದ್ದು ಪುದುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಕೂಡ ಕೈ ಜೋಡಿಸಿದ್ದಾರೆ. ಪುದುವೆಟ್ಟು ಶೌರ್ಯ ಸ್ವಯಂ ಸೇವಕರ ಕಾಳಜಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.