Site icon Suddi Belthangady

ಆಮಂತ್ರಣ ಸೇವಾ ಪ್ರತಿಷ್ಠಾನ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

ಗುರುವಾಯನಕೆರೆ: ಆಮಂತ್ರಣ ಸೇವಾ ಪ್ರತಿಷ್ಠಾನ ಅಳದಂಗಡಿಯ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಜು. 6ರಂದು ಬಿಡುಗಡೆಗೊಂಡಿತು.

ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ, ವಿಜಯರತ್ನ ಪುರಸ್ಕಾರ ಪಡೆದ ಸುಮಂತ್ ಕುಮಾರ್ ಜೈನ್ ಬಿಡುಗಡೆಗೊಳಿಸಿದರು. ಆಮಂತ್ರಣ ಸೇವಾ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿಜಯ ಕುಮಾರ್ ಜೈನ್ ಅಳದಂಗಡಿ, ಟ್ರಸ್ಟಿ ಅರುಣ್ ಅರುವ ಹಾಗೂ ಸದಸ್ಯರಾದ ಸುಪಾರ್ಶ್ವ ಜೈನ್ ಶಿರ್ಲಾಲು ಉಪಸ್ಥಿತರಿದ್ದರು.

ಜು.13ರಂದು ಅಳದಂಗಡಿ ಮೌಂಟ್ ಕಾರ್ಮೆಲ್ ಕಾಂಪ್ಲೆಕ್ಸ್ ನಲ್ಲಿ ಆಮಂತ್ರಣ ಸೇವಾ ಪ್ರತಿಷ್ಠಾನದ ಉದ್ಘಾಟನೆ ಹಾಗೂ ವಿವಿಧ ಸೇವಾ ಚಟುವಟಿಕೆ, ಪತ್ರಕರ್ತರಿಗೆ ಸನ್ಮಾನ, ಯಕ್ಷಗಾನ ತರಗತಿ ಪ್ರಾರಂಭ, ಕವಿಗೋಷ್ಠಿ, ನಡೆಯಲಿರುವುದು.

Exit mobile version