Site icon Suddi Belthangady

ಉಜಿರೆ: ಎಸ್.ಡಿ.ಎಂ.ವಸತಿ ಪದವಿ ಪೂರ್ವ ಕಾಲೇಜುನಲ್ಲಿ ಅತಿಥಿ ಉಪನ್ಯಾಸ ಕಾರ್ಯಕ್ರಮ

ಉಜಿರೆ: ಕಾಲೇಜಿನ ಗಣಿತ ವಿಭಾಗದಿಂದ, ‘ವೇದಿಕ್ ಮೆಥಮೇಟಿಕ್ಸ್ ಆಂಡ್ ಶಾರ್ಟ್ ಕಟ್ ಇನ್ ಮಾಥ್ಸ್ ‘ ಎಂಬ ವಿಷಯದ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವಿನ ಸಹಾಯಕ ಪ್ರಾಧ್ಯಾಪಕ ಡಾ. ಮಹೇಶ್ ಕೆ.ಬಿ. ಅವರು ಸಂಪನ್ಮೂಲ ವ್ಯಕ್ತಿ ಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಗಣಿತ ಶಾಸ್ತ್ರ ಸರಳೀಕರಣ, ವೇದಿಕ್ ಸೂತ್ರದ ಮೂಲಕ ವೇಗದ ಕ್ಯಾಲಿಕುಲೆಟರ್ ಬಳಕೆ, ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯೋಗಿ ಮಾರ್ಗೋಪಾಯಗಳು, ಮಾನಸಿಕ ದೃಢತೆ ಜೊತೆಗೆ ಗಣಿತ ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪಪ್ರಾಂಶುಪಾಲ ಮನಿಶ್ ಕುಮಾರ್, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಧನಲಕ್ಷ್ಮಿ, ಉಪನ್ಯಾಸಕಿ ಪ್ರಿಯ ಉಪಸ್ಥಿತರಿದ್ದರು.
ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕ ಕೃಷ್ಣಪ್ರಸಾದ್ ಆರ್. ನಿರೂಪಿಸಿ, ವಂದಿಸಿದರು.

Exit mobile version