Site icon Suddi Belthangady

ಧರ್ಮಸ್ಥಳ, ಬಂದಾರು, ಪದ್ಮುಂಜ, ಉಪ್ಪಿನಂಗಡಿಗೆ ಸರಕಾರಿ ಬಸ್ ಸಂಚಾರಕ್ಕೆ ಚಾಲನೆ: ಪದ್ಮುಂಜದಲ್ಲಿ ಭವ್ಯ ಸ್ವಾಗತ

ಪದ್ಮುಂಜ: ಗ್ರಾಮಸ್ಥರ ಹಲವಾರು ವರ್ಷಗಳ ಬೇಡಿಕೆಯಾದ ಧರ್ಮಸ್ಥಳ, ಬಂದಾರು, ಪದ್ಮುಂಜ, ಕುಪ್ಪೆಟ್ಟಿ ಮಾರ್ಗವಾಗಿ ಉಪ್ಪಿನಂಗಡಿಗೆ ಕೆ.ಎಸ್.ಆರ್.ಟಿ.ಸಿ ಸರಕಾರಿ ಬಸ್ ಸರಕಾರ ಮಂಜೂರು ಮಾಡಿದ್ದು ಪದ್ಮುಂಜದಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಕಣಿಯೂರು ಗ್ರಾಮ ಪಂಚಾಯತಿ ಸದಸ್ಯೆ ಸುಮತಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹಾಗೂ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಸಹಕಾರದೊಂದಿಗೆ ಸಾರಿಗೆ ಸಚಿವರಿಗೆ ಸಾರ್ವಜನಿಕ ಮನವಿ ಸಲ್ಲಿಸಿದ್ದರು. ಸದ್ರಿ ಮನವಿಗೆ ಸ್ಪಂದಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಧರ್ಮಸ್ಥಳ ಡಿಪ್ಪೋದಿಂದ ಬಂದಾರು, ಪದ್ಮುಂಜ, ಕುಪ್ಪೆಟ್ಟಿ ಮಾರ್ಗವಾಗಿ ಉಪ್ಪಿನಂಗಡಿಗೆ ಕೆ.ಎಸ್.ಆರ್.ಟಿ.ಸಿ ಸರಕಾರಿ ಬಸ್ ಮಂಜೂರು ಮಾಡಿದ್ದು. ಜು 9ರಂದು ಚಾಲನೆ ನೀಡಲಾಯಿತು.

ಪದ್ಮುಂಜದಲ್ಲಿ ಭವ್ಯ ಸ್ವಾಗತ: ಸರಕಾರಿ ಬಸ್ ಪದ್ಮುಂಜಕ್ಕೆ ತಲುಪಿದಾಗ ಪದ್ಮುಂಜದಲ್ಲಿ ಸೇರಿದ ಗ್ರಾಮಸ್ಥರು ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಹೂ ಗುಚ್ಛ ನೀಡಿ ಬಸ್ಸನ್ನು ಹೂ ಹಾರ ಹಾಕಿ ಸಿಂಗರಿಸಿ ಸಿಹಿ ತಿಂಡಿ ಹಂಚಿ ಸಂತೋಷಪಟ್ಟರು. ಗ್ರಾಮ ಪಂಚಾಯತಿ ಸದಸ್ಯೆ ಸುಮತಿ ಶೆಟ್ಟಿ, ಪಂಚ ಗೇರಂಟಿ ಯೋಜನೆಯ ಸದಸ್ಯರಾದ ಮರಿಟಾ ಪಿಂಟೊ, ಕೇಶವ ನಾಯ್ಕ, ಶರೀಫ್ ಸಬರಬೈಲು, ಕಾಂಗ್ರೇಸ್ ಪಂಚಾಯತ್ ಸಮಿತಿ ಅಧ್ಯಕ್ಷ ಸತೀಶ್ ರಾವ್, 3ನೇ ಬ್ಲಾಕ್ ಬೂತ್ ಅಧ್ಯಕ್ಷ ಶೇಕರ ಶೆಟ್ಟಿ, ಕಾಂಗ್ರೆಸ್ ನಾಯಕರಾದ ಹರಿಶ್ಚಂದ್ರ ಪೂಜಾರಿ, ವಿಠಲ್ ಭಟ್, ಅಣ್ಣು ಸಾದನ, ಮುಹಮ್ಮದ್ ಕಲಂದರ್, ತೌಸೀಫ್, ಅಬ್ದುಲ್ ರಹ್ಮಾನ್, ಚಂದ್ರಕಾಂತ ರಾವ್, ರಮಾನಂದ ಪೂಜಾರಿ ಆದರ್ಶ ಶೆಟ್ಟಿ, ಶ್ರುತನ್ ಶೆಟ್ಟಿ, ಆಸಿಫ್, ಅಬ್ದರ್ರಝಾಖ್ ಪ್ರವೀಣ, ರಫೀಕ್ ಸುಲೈಮಾನ್, ಹಂಝತ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಕಾಂಗ್ರೇಸ್ ನಾಯಕ ಅಬ್ಬಾಸ್ ಬಟ್ಲಡ್ಕ ಮಾತನಾಡಿ ಶುಭ ಹಾರೈಸಿದರು. ಕಾಂಗ್ರೆಸ್ ಬೂತ್ ಸಮಿತಿ ಅಧ್ಯಕ್ಷ ಕಾಸಿಂ ಪದ್ಮುಂಜ ಅವರು ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು.

Exit mobile version