Site icon Suddi Belthangady

ಕೊಕ್ಕಡ: ಟಿ.ಬಿ. ಖಾಯಿಲೆ ಪೀಡಿತ ವ್ಯಕ್ತಿ ಬಾವಿಗೆ ಹಾರಿ ಆತ್ಮಹತ್ಯೆ

ಕೊಕ್ಕಡ: ಟಿ.ಬಿ. ಖಾಯಿಲೆ ಉಲ್ಬಣಗೊಂಡಿರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಜು.6ರಂದು ಮಧ್ಯರಾತ್ರಿ ನಡೆದಿದೆ.

ಕಾಪಿನಬಾಗಿಲು ನಿವಾಸಿ ಅಂಬೋಡಿ(54ವ.) ಆತ್ಮಹತ್ಯೆ ಮಾಡಿಕೊಂಡವರು. ಅಂಬೋಡಿ ಅವರು ಟಿ.ಬಿ.ಖಾಯಿಲೆಯಿಂದ ಬಳಲುತ್ತಿದ್ದು ಎರಡು ವಾರದ ಹಿಂದೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಜು.4ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಬಂದು ವಿಶ್ರಾಂತಿಯಲ್ಲಿದ್ದರು. ಜು.6ರಂದು ರಾತ್ರಿ ಖಾಯಿಲೆ ಉಲ್ಬಣಗೊಂಡಿದ್ದು ರಾತ್ರಿ 11.30 ಗಂಟೆಗೆ ಮನೆಯ ಮುಂಬಾಗಿಲಿನ ಚಿಲಕ ಹಾಕಿ ಮನೆಯ ಅಂಗಳದಲ್ಲಿರುವ ಬಾವಿಗೆ ಹಾರಿದ್ದರು. ಶಬ್ದ ಕೇಳಿ ಎಚ್ಚರಗೊಂಡ ಅಂಬೋಡಿ ಅವರ ಪತ್ನಿ ವಿನಯ ಅವರು ಅಂಬೋಡಿ ಅವರ ತಮ್ಮನ ಮಗ ಅವಿನಾಶ್‌ರವರಿಗೆ ವಿಚಾರ ತಿಳಿಸಿ ಅವರ ಜೊತೆಗೆ ಸ್ಥಳಕ್ಕೆ ಬಂದು ನೋಡಿದಾಗ ಅಂಬೋಡಿಯವರು ತನ್ನ ಲುಂಗಿ ಮತ್ತು ಟಾರ್ಚ್ ಅನ್ನು ಬಾವಿಯ ದಂಡೆಯಲ್ಲಿಟ್ಟು ಬಾವಿ ನೀರಿಗೆ ಹಾರಿ ಮೃತಪಟ್ಟಿದ್ದು ಮೃತ ದೇಹವು ಬಾವಿಯಲ್ಲಿರುವುದು ಕಂಡುಬಂದಿರುತ್ತದೆ. ಅಂಬೋಡಿಯವರು ತನಗಿರುವ ಖಾಯಿಲೆಯಿಂದಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಮೃತಪಟ್ಟಿರುವುದಾಗಿ ಅವಿನಾಶ್ ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version