Site icon Suddi Belthangady

ಹಾವೇರಿಯಲ್ಲಿ ನಡೆಯುವ ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಭಾಗಿ

ಬಳಂಜ: ಜಿಲ್ಲೆಯ ಹೆಸರಾಂತ ಕುಣಿತ ಭಜನಾ ಮಂಡಳಿಗಳಲ್ಲಿ ಒಂದಾದ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರು ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಜು. 10ರಂದು ನಡೆಯುವ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ ಶ್ರೀ ಗುರುಪೂರ್ಣಿಮಾ 2025 ಉತ್ಸವದಲ್ಲಿ ಸಾಯಿಬಾಬಾರ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಕುಣಿತ ಭಜನಾ ಕಾರ್ಯಕ್ರಮ ನೀಡಲು ತೆರಳಿದೆ.

ಸಮಾಜ ಸೇವಕ ಹರೀಶ್ ವೈ ಚಂದ್ರಮರ ಪ್ರಧಾನ ಸಂಚಾಲಕತ್ವದಲ್ಲಿ ಬ್ರಹ್ಮಶ್ರೀ ಮಂಡಳಿಯು ಈಗಾಗಲೇ ಮುನ್ನೂರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದು ಹೊರ ಜಿಲ್ಲೆಯಲ್ಲೂ ಬಳಂಜದ ಹೆಸರನ್ನು ಕುಣಿತ ಭಜನೆಯಲ್ಲಿ ಪ್ರಥಮವಾಗಿ ಪಸರಿಸಿದ ಕೀರ್ತಿಗೆ ಮಂಡಳಿಯು ಪಾತ್ರವಾಗಿದೆ. ನಮ್ಮ ಭಜನಾ ಮಂಡಳಿಯ ಕುಣಿತ ಭಜನೆಯನ್ನು ಮೆಚ್ಚಿದ ಹೊರ ಜಿಲ್ಲೆಯ ಕಾರ್ಯಕ್ರಮ ಸಂಘಟರುಗಳು ನಮ್ಮ ಜಿಲ್ಲೆಯ ಇತರ ಭಜನಾ ಮಂಡಳಿಗಳನ್ನು ಸಹ ಆಹ್ವಾನಿಸುತ್ತಿರುವುದು ಸಂತಸ ತಂದಿದೆ ಎಂದು ಸಂಚಾಲಕ ಹರೀಶ್. ವೈ.ಚಂದ್ರಮ ತಿಳಿಸಿದ್ದಾರೆ.

Exit mobile version