ಬೆಳ್ತಂಗಡಿ: ಜನತೆ ಮತ್ತು ನ್ಯಾಯವಾದಿಗಳ ಬಹು ದಿನಗಳ ಬೇಡಿಕೆಯಾಗಿದ್ದ ಹೊಸ ನ್ಯಾಯಾಲಯ ಸಂಕೀರ್ಣದ ಮೊದಲ ಹಂತದ ಕಾಮಗಾರಿಗೆ ಸರಕಾರ ರೂ. 9ಕೋಟಿ ಮಂಜೂರುಗೊಳಿಸಿದ್ದು ಸದ್ರಿ ಕಾಮಗಾರಿಯ ಕುರಿತಾದ ಪೂರಕ ಕಾರ್ಯಗಳ ಬಗ್ಗೆ ಜು.7ರಂದು ಮಂಗಳೂರಿನಲ್ಲಿ ವಿಧಾನ ಪರಿಷತ್ ಶಾಸಕ ಐವನ್ ಡಿ ಸೋಜಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಯಿತು.
ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಅಪರ ಸರ್ಕಾರಿ ವಕೀಲ ಮನೋಹರ ಕುಮಾರ್ ಎ., ಹಿರಿಯ ಸಮಿತಿ ಚೇರ್ಮನ್ ಅಲೋಶಿಯಸ್ ಎಸ್. ಲೋಬೊ, ಮಾಜಿ ಅಧ್ಯಕ್ಷ ಶಶಿಕಿರಣ್ ಜೈನ್ ಮತ್ತು ಕೋಶಾಧಿಕಾರಿ ಪ್ರಶಾಂತ್ ಎಮ್. ಉಪಸ್ಥಿತರಿದ್ದರು.