ಬೆಳ್ತಂಗಡಿ: ಕಿಲ್ಲೂರಿನಲ್ಲಿ ಹೋರಿಯೊಂದು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಬಗ್ಗೆ ಕಳೆದ ರಾತ್ರಿ ಜು.7ರಂದು ಬೆಳಕಿಗೆ ಬಂದಿದೆ. ಕಿಲ್ಲೂರಿನ ಇಸುಬು ಎಂಬವರಿಗೆ ಸೇರಿದ ಒಂದು ವರ್ಷದ ಗಿರ್ ಹೋರಿ ಇದಾಗಿದೆ. ಹೋರಿ ರಾತ್ರಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಹೋರಿಯ ಸಾವಿಗೆ ಕಾರಣವೇನು ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.
ಬಂಗಾಡಿ ಕಿಲ್ಲೂರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಹೋರಿ ಸಾವು
