Site icon Suddi Belthangady

ಆಳ್ವಾಸ್‌: ಮಾನ್ಸೂನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಉದ್ಘಾಟನೆ

ಬೆಳ್ತಂಗಡಿ: ಇತ್ತೀಚಿನ ದಿನಗಳಲ್ಲಿ ಬ್ಯಾಡ್ಮಿಂಟನ್ ಕ್ರೀಡೆಗೆ ಮೂಡುಬಿದಿರೆಯಲ್ಲಿ ಉತ್ತಮ ಪ್ರೋತ್ಸಾಹ ದೊರೆಯುತ್ತಿದೆ. ಈ ಕ್ರೀಡೆಯ ಮೂಲಕ ರಾಷ್ಟ್ರ ಮಟ್ಟದ ಇನ್ನಷ್ಟು ಪ್ರತಿಭೆಗಳು ಮೂಡಿ ಬರಲಿ ಎಂದು ಸಿಎ ಉಮೇಶ್ ರಾವ್ ನುಡಿದರು.

ಅವರು ಆಳ್ವಾಸ್ ಬ್ಯಾಡ್ಮಿಂಟನ್ ಅಕಾಡೆಮಿಯು ಎಮ್.ಕೆ. ಅನಂತರಾಜ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ಚೊಚ್ಚಲ ಬಾರಿಗೆ ಮಕ್ಕಳಿಗಾಗಿ ಆಯೋಜಿಸಿದ್ದ ‘ಮಾನ್ಸೂನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ್ನು’ ಉದ್ಘಾಟಿಸಿ ಮಾತನಾಡಿದರು.

“ಕ್ರೀಡೆಯಲ್ಲಿ ಎಂದೂ ಕೇವಲ ಗೆಲುವಿಗಾಗಿ ಆಟವಾಡಬೇಡಿ. ಅನುಭವದಿಂದ ಸಿಗುವ ಪಾಠ ಅಮೂಲ್ಯವಾದುದ್ದು. ಆಟದಲ್ಲಿ ಸೋಲೂ ಒಂದು ಪಾಠವಾಗಿದ್ದು, ನಿರಂತರ ಕಲಿಕೆ ಮತ್ತು ಅಭ್ಯಾಸವೇ ಕ್ರೀಡಾಪಟುವಿನ ನಿಜವಾದ ಬಲ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ. ವಿನಯ್ ಆಳ್ವ, “ಕ್ರೀಡೆ ಎಂದರೆ ಕೇವಲ ಗೆಲುವು ಅಥವ ಸೋಲಲ್ಲ. ಕ್ರೀಡಾ ಮನೋಭಾವದ ಬೆಳೆವಣಿಗೆ ಮುಖ್ಯ. ಪ್ರತಿಯೊಬ್ಬ ಕ್ರೀಡಾಪಟುವೂ ತನ್ನ ತೋರಬೇಕು, ನಿಯಮಗಳನು ಎದುರಾಳಿಗೆ ಗೌರವ ಪಾಲಿಸಬೇಕು ಮತ್ತು ಫಲಿತಾಂಶವೇನು ಆದರೂ ತನ್ನ ಶ್ರೇಷ್ಠ ಪ್ರಯತ್ನ ನೀಡಬೇಕು,” ಎಂದು ಯುವ ಕ್ರೀಡಾಪಟುಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.

ಈ ಕ್ರೀಡಾಕೂಟವು 11, 13, 15 ಮತ್ತು 17 ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರಿಗಾಗಿ ವಿವಿಧ ವಿಭಾಗಗಳಲ್ಲಿ ಆಯೋಜಿಸಲಾಗಿತ್ತು. ಕರ್ನಾಟಕದ ವಿವಿಧ ಜಿಲ್ಲೆಗಳ 300ಕ್ಕೂ ಹೆಚ್ಚು ಕಿರಿಯ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡರು. ವಿಜೇತರಿಗೆ ಟ್ರೋಫಿ ಮತ್ತು ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಆರ್‌.ಎಫ್‌.ಒ. ಮಂಜುನಾಥ್, ಆಳ್ವಾಸ್ ಸಂಸ್ಥೆಯ ಹಣಕಾಸು ಅಧಿಕಾರಿ ಶಾಂತರಾಮ ಕಾಮತ್, ದೈಹಿಕ ನಿರ್ದೇಶಕ ಉದಯಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಚೈತ್ರ ಕಾಠ್ಯಕ್ರಮ ನಿರ್ವಹಿಸಿದರು.

Exit mobile version