Site icon Suddi Belthangady

ತ್ವೈಬಾ ಮರ್ಕಝ್ ಮೂಡಬಿದ್ರೆ ಧಾರ್ಮಿಕ ಕಾರ್ಯಕ್ರಮ

ಪೆರಿಂಜೆ: ಪಟ್ಟಾಡಿಯಲ್ಲಿ ಸ್ಥಾಪಿಸಿರುವ ಮರ್ಕಝ್ ‎ತ್ವೈಬಾ ಎಜುಕೇಶನ್ ಸೆಂಟರಿನ ಸನ್ನಿಧಿಯಲ್ಲಿ ಹಾಜಿಮಲಂಗ್ ‎ಕ್ಯಾಂಪಸ್ ನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮವು ಜು. 4 ರಂದು ತ್ವೈಬಾ ಮರ್ಕಝ್ ಮೂಡಬಿದ್ರೆಯ ಸಂಸ್ಥೆಯ ‎ಅಧ್ಯಕ್ಷ ಸೈಯ್ಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ‎ರವರ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಯಕ್ರಮದ ‎ಉದ್ಘಾಟನೆಯನ್ನು ಮೊಹಮ್ಮದ್ ಶರೀಫ್ ಫೈಝಿ ಹೊಸಂಗಡಿ ‎ಗೈದರು. ಸಂದೇಶ ಭಾಷಣವನ್ನು ಹುಸೈನ್ ಸಅದಿ ಕೆ.ಸಿ.ರೋಡ್ ‎ಗೈದು ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ‎ಕಾರ್ಯಕ್ರಮದಲ್ಲಿ, ಮಸ್ಊದ್ ಸಅದಿ, ರಝಾಕ್ ಸಖಾಫಿ ಮಡಂತ್ಯಾರ್, ತಾಜುದ್ದೀನ್ ಸಖಾಫಿ ‎ಪೂಲಾಬೆ, ಕಲಂದರ್ ಬಾಖವಿ ಅಲ್ ಮಣ್ಣಾನಿ ಪಡ್ಡಂದಡ್ಕ, ‎ಪೆರಮೊಗರು ಫಾಳಿಲಿ,ಕುಪ್ಪೆಟ್ಟಿ ಮುದರ್ರಿಸ್, ಹಂಝ ಮದನಿ, ‎ಮನ್ಸೂರ್ ಸಖಾಫಿ ಗೋಳಿಯಂಗಡಿರವರು ಮುಖ್ಯ ಅತಿಥಿಗಳಾಗಿ ‎ಭಾಗವಹಿಸಿ ಶುಭ ಹಾರೈಸಿದರು. ಮೊಹಮ್ಮದ್ ಶರೀಫ್ ಸಖಾಫಿ ‎ಮಾಣಿ ಸ್ವಾಗತಿಸಿ ತರ್ಫೀದ್ ಮುಈನೀ ಕಾಶಿಪಟ್ನ ‎ವಂದಿಸಿದರು.‎

Exit mobile version