Site icon Suddi Belthangady

ಮೈರೋಳ್ತಡ್ಕ: ಶಾಸಕರಿಗೆ ಅಭಿನಂದನೆ

ಬೆಳ್ತಂಗಡಿ: ಬಂದಾರು ಗ್ರಾಮ ಮೈರೋಳ್ತಡ್ಕ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಆಂಗ್ಲಮಾಧ್ಯಮ (ದ್ವಿ ಭಾಷಾ) ತರಗತಿಗಳನ್ನು ಪ್ರಾರಂಭಿಸಲು ಸರ್ಕಾರದಿಂದ ಅನುಮತಿ ಆದೇಶ ತರಲು ವಿಶೇಷ ಮುತುವರ್ಜಿ ವಹಿಸಿ ಸಹಕರಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರಿಗೆ ಜು.7ರಂದು ಶಾಸಕರ ಕಚೇರಿ ಶ್ರಮಿಕದಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಶಾಂತ್ ಗೌಡ ನಿರುoಬುಡ, ಸಮಿತಿ ಪದಾಧಿಕಾರಿಗಳಾದ ಪುಷ್ಪಾ, ಹರಿಣಾಕ್ಷಿ, ಸವಿತಾ, ಜ್ಯೋತಿ, ಶ್ರೀಧರ ಗೌಡ ಕುಂಬುಡಂಗೆ, ಕೃಷ್ಣಪ್ಪ ಗೌಡ ಖಂಡಿಗ, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷರಾದ ಡೊಂಬಯ್ಯ ಗೌಡ ಖಂಡಿಗ, ಬಾಬು ಗೌಡ ಮಡ್ಯಲಕoಡ, ನಿರಂಜನ ಗೌಡ ನಡುಮಜಲು, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಕೃಷ್ಣಯ್ಯ ಆಚಾರ್ಯ, ಮೋಹನ್ ಗೌಡ ಗುಂಡಿಖಂಡ, ಮನೋಜ್ ಗೌಡ ನಾವುಳೆ, ಮೋಹನ್ ಬಂಗೇರ, ಗಿರೀಶ್ ಗೌಡ ಬಿ.ಕೆ. ಉಪಸ್ಥಿತರಿದ್ದರು.

Exit mobile version