✍️ವರದಿ ಹರ್ಷ ಬಳ್ಳಮಂಜ
ಮಡಂತ್ಯಾರು: ರೋಟರಿ ಕ್ಲಬ್ ನ 2025-2026ನೇ ಸಾಲಿನ ಪದಗ್ರಹಣ ಸಮಾರಂಭವು ಜು. 2ರಂದು ಎಸ್.ಡಿ.ಎಸ್. ಮಿನಿ ಹಾಲ್ ನಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ಅನುಸ್ಥಾಪನಾ ಅಧಿಕಾರಿಯಾಗಿ ವಿಕ್ರಮ್ ದತ್ತ, ಕ್ಲಬ್ ಸಲಹೆಗಾರ ಪ್ರಕಾಶ್ ಕಾರಂತ್, ಸಹಾಯಕ ಗವರ್ನರ್ ಡಾ. ಎ. ಜಯ ಕುಮಾರ್ ಶೆಟ್ಟಿ, ವಲಯ ಲೆಫ್ಟಿನೆಂಟ್ ಪ್ರಮುಖ ದಾನಿ ಪ್ರಕಾಶ್ ಬಾಳಿಗಾ, ಸೇಕ್ರೆಡ್ ಹಾರ್ಟ್ ಚರ್ಚ್ ಪ್ಯಾರಿಷ್ ಪಾದ್ರಿ ರೆವರೆಂಡ್ ಫಾದರ್ ಸ್ಟ್ಯಾನಿ ಗೋವಿಯಸ್ ಉಪಸ್ಥಿತರಿದ್ದರು. 2025_26 ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಮ್ಯಾಕ್ಸಿಮ ಆಲ್ಬಕುಎರ್ಕ್, ಕಾರ್ಯದರ್ಶಿಯಾಗಿ ಜಿ. ವಾಸುದೇವ ಗೌಡ, ಐ.ಪಿ.ಪಿ ನಿತ್ಯಾನಂದ ಡಿ., ಡೈರೆಕ್ಟರ್ ಕಾಂತಪ್ಪ ಗೌಡ ಹಟ್ಟತ್ತೋಡಿ, ಹೆರಾಲ್ಡ್ ಮೋನೀಸ್, ರಾಧಾಕೃಷ್ಣ ಶೆಟ್ಟಿ, ಉದಯಕುಮಾರ್, ರೊನಾಲ್ಡ್ ಸಿಕ್ವೀರ, ಮೋನಪ್ಪ ಪೂಜಾರಿ, ಶ್ರೀಧರ ರಾವ್ ಟಿ. ವಿ., ಜಯಂತ ಬಿ. ಶೆಟ್ಟಿ, ದಿನಕರ ನಾರಾಯಣಶೆಟ್ಟಿ, ಚಿತ್ತರಂಜನ್, ರಮೇಶ್ ಮೂಲ್ಯ, ಕಾಲೇಸ್ತಿನ ಡಿಸೋಜ, ಸುರೇಶ್ ಸೋಣದೂರು, ಹರ್ಷ ನಾರಾಯಣ ಶೆಟ್ಟಿ, ಪ್ರಶಾಂತ್ ಶೆಟ್ಟಿ, ತುಳಸಿ ಪೈ ಅವರು ಆಯ್ಕೆಯಾದರು.
ನೂತನವಾಗಿ ಲಿಲ್ಲಿ ಪಾಯಿಸ್, ಆಶಾ ದಿನಕರ್ ಶೆಟ್ಟಿ, ಶಮೀಮಾ ಅಳಕ್ಕೆ, ರೋಹಿಣಿ ಚಂದ್ರಹಾಸ ಪಕಳ, ಅಶೋಕ್ ಗುಂಡ್ಯಲ್ಕೆ ರೋಟರಿ ಕ್ಲಬ್ ಸೇರ್ಪಡೆಗೊಂಡರು. ರೋಟರಿ ಪ್ರಶಾಂತ್ ಶೆಟ್ಟಿ ಮೂಡಾಯೂರು ಅವರಿಂದ ಸರಕಾರಿ ಪ್ರೌಢ ಶಾಲೆ ಮಚ್ಚಿನದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು. ಅಕ್ಷಯ ಪುಡ್ಸ್ ಪುಂಜಾಲಕಟ್ಟೆ ಮಾಲಕಿ ವೇದಾವತಿ ಅವರಿಂದ ಪುಂಜಾಲಕಟ್ಟೆ ಅಂಗನವಾಡಿ ಶಾಲಾ ಮಕ್ಕಳಿಗೆ ಚೇರ್ ನೀಡಲಾಯಿತು. ಆರ್. ಹೆಚ್. ಎಫ್. ಮೋನಪ್ಪ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಆರ್. ಜಿ. ವಾಸುದೇವ ಗೌಡ ವಂದಿಸಿದರು.