Site icon Suddi Belthangady

ಪಿಲಿಗೂಡು: ಅಕ್ರಮ ದನ ಸಾಗಾಟ – ಆರೋಪಿಗಳ ಬಂಧನ-ಜಾನುವಾರು, ವಾಹನ ವಶ

ಬೆಳ್ತಂಗಡಿ: ಪಿಕಪ್ ವಾಹನವೊಂದರಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಪ್ರಕರಣ ಪತ್ತೆ ಹಚ್ಚಿರುವ ಉಪ್ಪಿನಂಗಡಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಜಾನುವಾರು ಹಾಗೂ ವಾಹನ ವಶಪಡಿಸಿಕೊಂಡಿರುವ ಘಟನೆ ಜು.5ರಂದು ನಡೆದಿದೆ.

ಉಪ್ಪಿನಂಗಡಿ ಪೊಲೀಸ್ ಠಾಣೆ ಪಿಎಸ್‌ಐ ತನಿಖೆ-1 ಗುರುನಾಥ ಬಿ.ಹಾದಿಮನಿ ಅವರು ಗಸ್ತು ಕರ್ತವ್ಯದ ಬಗ್ಗೆ ಠಾಣೆಯಿಂದ ಹೊರಟು ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಪಿಲಿಗೂಡು ಎಂಬಲ್ಲಿಗೆ ತಲುಪಿದಾಗ ಪೆದಮಲೆ ಕಡೆಯಿಂದ ಪಿಕಪ್ ವಾಹನದಲ್ಲಿ ದನವನ್ನು ಹೇರಿಕೊಂಡು ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ಪಿಕಪ್ ವಾಹನವನ್ನು ನಿಲ್ಲಿಸಿ, ಪರಿಶೀಲಿಸಿದಾಗ ಆರೋಪಿಗಳಾದ ಅಬೂಬಕ್ಕರ್ ಯಾನೆ ಶಮೀರ್, ಇಮ್ರಾನ್ ಹಾಗೂ ಮೊಹಮ್ಮದ್ ಅಕ್ರಮ್‌ರವರು ಪಿಕಪ್ ವಾಹನದಲ್ಲಿ (ಕೆಎ20, ಬಿ 3993) ದನವನ್ನು ಹಿಂಸಾತ್ಮಕವಾಗಿ ಯಾವುದೇ ಪರವಾನಿಗೆಯನ್ನು ಪಡೆದುಕೊಳ್ಳದೇ ವಧೆ ಮಾಡುವ ಸಲುವಾಗಿ ಸಾಗಾಟ ಮಾಡುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಹಾಗೂ ಪಿಕಪ್ ವಾಹನದಲ್ಲಿದ್ದ 22 ಸಾವಿರ ರೂ. ಮೌಲ್ಯದ ದನವನ್ನು, ಸಾಗಾಟಕ್ಕೆ ಉಪಯೋಗಿಸಿದ 2 ಲಕ್ಷ ರೂ. ಮೌಲ್ಯದ ಪಿಕಪ್ ವಾಹನ ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version