Site icon Suddi Belthangady

ಪರಸ್ಪರ ಯುವಕ ಮಂಡಲದ ಅಧ್ಯಕ್ಷರಾಗಿ ಅಶೋಕ್ ಎಂ.ಕೆ., ಪರಸ್ಪರ ಸೇವಾ ಬ್ರಿಗೇಡಿನ ಅಧ್ಯಕ್ಷರಾಗಿ ಪ್ರವೀಣ್ ದೇವಾಡಿಗ ಆಯ್ಕೆ

ನಾರಾವಿ: ಪರಸ್ಪರ ಯುವಕ ಮಂಡಲ ಪರಸ್ಪರ ಸೇವಾ ಬ್ರಿಗೇಡ್ ಈದು -ನಾರಾವಿ 2025-2026 ಸಾಲಿನ 2ವರ್ಷಗಳ ಅವಧಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮ ಶ್ರೀರಾಮ್ ಪ್ಯಾಲೇಸ್ ಈದು ಮುಗೇರಡ್ಕ ಇಲ್ಲಿ ನಡೆಯಲಿದೆ. ಪರಸ್ಪರ ಯುವಕ ಮಂಡಲ ಇದರ ನೂತನ ಅಧ್ಯಕ್ಷರಾಗಿ ಅಶೋಕ್ ಎಂ.ಕೆ. ಪರಸ್ಪರ ಸೇವಾ ಬ್ರಿಗೇಡಿನ ಅಧ್ಯಕ್ಷರಾಗಿ ಪ್ರವೀಣ್ ದೇವಾಡಿಗ ಆಯ್ಕೆಯಾಗಿದ್ದಾರೆ.

ಗೌರವ ಸಲಹೆಗಾರರಾಗಿ ಡಾ। ಪ್ರಸಾದ್ ಬಿ. ಶೆಟ್ಟಿ, ಗುರುಪ್ರಸಾದ್ ನಾರಾವಿ, ಪ್ರಸಾದ್ ಪೂಜಾರಿ, ರತೇಶ್‌ ಕುಮಾ‌ರ್, ಗೌರವಧ್ಯಕ್ಷರಾಗಿ ಜಗದೀಶ್ ಅಂಚನ್, ಪರಸ್ಪರ ಯುವಕ ಮಂಡಲದ ಅಧ್ಯಕ್ಷರಾಗಿ ಅಶೋಕ್ ಎಂ.ಕೆ, ಉಪಾಧ್ಯಕ್ಷರಾಗಿ ಚಂದಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ರಜತ್ ದೇವಾಡಿಗ, ಕಾರ್ಯದರ್ಶಿಯಾಗಿ ಸುಮಂತ್ ಶೆಟ್ಟಿ, ಕೋಶಧಿಕಾರಿಯಾಗಿ ಅಶೋಕ್ ದೇವಾಡಿಗ, ಜೊತೆ ಕಾರ್ಯದರ್ಶಿಯಾಗಿ ಸುರೇಶ್ ಮಠದಬೆಟ್ಟು ಸಂಘಟನಾ ಕಾರ್ಯದರ್ಶಿಯಾಗಿ ಭರತ್ ದೇವಾಡಿಗ ಸಾಮಾಜಿಕ ಸಾಮಾಜಿಕ ಜಾಲತಾಣ ಸಮಿತಿಯ ಸದ: ನಮ್ಮ ಕಾರ್ಲ ವಾಟ್ಸಪ್ ಗ್ರೂಪ್ ಡಿ ಮಠದ ಬೆಟ್ಟು ಆಯ್ಕೆಯಾಗಿದ್ದಾರೆ.

ಪರಸ್ಪರ ಸೇವಾ ಬ್ರಿಗೇಡಿನ ಅಧ್ಯಕ್ಷರಾಗಿ ಪ್ರವೀಣ್ ದೇವಾಡಿಗ, ಉಪಾಧ್ಯಕ್ಷರಾಗಿ ಸುಧೀರ್ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ಎಂ.ಕೆ. ಕಾರ್ಯದರ್ಶಿಯಾಗಿ ನಿತೇಶ್ ಮಠದ ಬೆಟ್ಟು, ಕೋಶಾಧಿಕಾರಿಯಾಗಿ ಅಣ್ಣು ಮುಗೇರಡ್ಕ, ಜೊತೆ ಕಾರ್ಯದರ್ಶಿ ಸಂದೀಪ್ ಪೂಜಾರಿ ಮುಗೇರಡ್ಕ ಸಾಮಾಜಿಕ ಜಾಲತಾಣ ಸಮಿತಿಯ ಸದಸ್ಯರಾಗಿ ಸಂತೋಷ ಆಚಾರ್ಯ, ಯಶೋಧರ ದೇವಾಡಿಗ, ಚೇತನ್ ಮುಗೇರಡ್ಕ ಆಯ್ಕೆಯಾದರು.

Exit mobile version