Site icon Suddi Belthangady

ಉಜಿರೆ ಎಸ್ ಡಿ ಎಂ ಪ. ಪೂ. ಕಾಲೇಜಿನಲ್ಲಿ ಎನ್.ಎಸ್.ಎಸ್. ಕಾರ್ಯ ಚಟುವಟಿಕೆಗಳ ಉದ್ಘಾಟನೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ನಡೆಯಿತು. ಉಜಿರೆ ಎಸ್. ಡಿ. ಎಂ ಕಾಲೇಜು (ಸ್ವಾಯತ್ತ) ಅರ್ಥ ಶಾಸ್ತ್ರ ಮತ್ತು ಗ್ರಾಮೀಣಾಭಿವೃದ್ಧಿ ವಿಭಾಗದ ಮುಖ್ಯಸ್ಥ ಡಾ. ಗಣರಾಜ್ ಕೆ. ಉದ್ಘಾಟಿಸಿ ಮಾತನಾಡಿದ ಅವರು ” ಸೇವೆಯೇ ಧ್ಯೇಯವಾಗಿರುವ ರಾಷ್ಟ್ರೀಯ ಸೇವಾ ಯೋಜನೆಯು ದೇಶದ ಅಭಿವೃದ್ಧಿಗೆ ಬಹಳ ಕೊಡುಗೆ ನೀದಿದೆ. ಅಲ್ಲದೆ ಸ್ವಯಂ ಸೇವಕರಿಗೆ ಸಮಾಜದ ಜೊತೆ ಒಡನಾಟವನ್ನು ಬೆಳೆಸಿ ಅವರ ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿ. ಆದುದರಿಂದ ತಮ್ಮನ್ನು ಅದರಲ್ಲಿ ತೊಡಗಿಸಿಕೊಂಡು ಉತ್ತಮ ವ್ಯಕ್ತಿತ್ವ ಮೂಡಿಸಿಕೊಳ್ಳಬೇಕು “ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಚಾರ್ಯ ಪ್ರಮೋದ್ ಕುಮಾರ್ “ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯು ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ ಯಶಸ್ವಿಯಾಗಿ ಮುನ್ನಡೆದುಕೊಂಡು ಬಂದಿದೆ.

ಇಲ್ಲಿನ ಸ್ವಯಂ ಸೇವಕರು ರಾಜ್ಯ,ರಾಷ್ಟ್ರ ಮಟ್ಟದ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಮುಂದೆಯೂ ಇಂತಹ ಸಾಧನೆಗಳು ಮರುಕಳಿಸಲಿ ” ಎಂದು ಹೇಳಿದರು. ವೇದಿಕೆಯಲ್ಲಿ ಉಪಪ್ರಾಂಶುಪಾಲ ಡಾ. ರಾಜೇಶ್ ಬಿ.,ನಿಕಟ ಪೂರ್ವ ಯೋಜನಾಧಿಕಾರಿ ಡಾ. ಪ್ರಸನ್ನ ಕುಮಾರ್ ಐತಾಳ್, ಯೋಜನಾಧಿಕಾರಿ ವಿಶ್ವನಾಥ್ ಎಸ್, ಸಹ ಯೋಜನಾಧಿಕಾರಿ ಶೋಭಾ ಪಿ ಇದ್ದರು . ಕಾರ್ಯಕ್ರಮದಲ್ಲಿ ಸಲಹಾ ಸಮಿತಿ ಸದಸ್ಯೆ ದಿವ್ಯ ಕುಮಾರಿ ಹಾಗೂ ನಾಗರಾಜ್ ಭಂಡಾರಿರವರು ಉಪಸ್ಥಿತರಿದ್ದರು. ಸ್ವಯಂ ಸೇವಕಿ ಮೇಘ ಸ್ವಾಗತಿಸಿದರು. ಸ್ವಯಂ ಸೇವಕಿ ಧನ್ಯ ನಿರೂಪಿಸಿ, ಸ್ವಯಂ ಸೇವಕಿ ಗ್ರಂಥ ಧನ್ಯವಾದವಿತ್ತರು.

Exit mobile version