Site icon Suddi Belthangady

ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಮಹಾಸಭೆ:ಅಧ್ಯಕ್ಷರಾಗಿ ಉಮಾ ಆರ್. ರಾವ್ ಕಾರ್ಯದರ್ಶಿಯಾಗಿ ಶಾಂತಾ ಬಂಗೇರ, ಕೋಶಾಧಿಕಾರಿಯಾಗಿ ಯಶೋಧ ಲಾಯಿಲ

ಬೆಳ್ತಂಗಡಿ: ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಮಹಾ ಸಭೆ ಅಧ್ಯಕ್ಷೆ ಸವಿತಾ ಜಯದೇವ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಅಧ್ಯಕ್ಷರಾಗಿ ಉಮಾ ಆರ್. ರಾವ್, ಕಾರ್ಯದರ್ಶಿಯಾಗಿ ಶಾಂತಾ ಬಂಗೇರ, ಕೋಶಾಧಿಕಾರಿಯಾಗಿ ಯಶೋಧ ಲಾಯಿಲ ಆಯ್ಕೆಯಾದರು. ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷರಾಗಿ ಉಷಾ ಲಕ್ಷ್ಮಣ ಗೌಡ, ಜತೆ ಕಾರ್ಯದರ್ಶಿಯಾಗಿ ಗೀತಾ ರಾಜಾವರ್ಮ, ಗೌರವಾಧ್ಯರಾಗಿ ಸವಿತಾ ಜಯದೇವ್, ಮಹಾ ಪೋಷಕರಾಗಿ ಲೋಕೇಶ್ವರಿ ವಿನಯಚಂದ್ರ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ವಿನೋದಿನಿ ರಾಮಪ್ಪ, ಆಶಾ ಸತೀಶ್, ನೇತ್ರಾ ಅಶೋಕ್, ಸಂಧ್ಯಾ ಕಿರಣ್, ಜಯಂತಿ ಪಿ., ಸುರೇಖಾ ಮಂಜುನಾಥ, ಗೌರವ ಸಲಹೆಗಾರರಾಗಿ ರಮಾ ಪರಂಜಾಪೆ, ವೀಣಾ ವಿ. ಕುಮಾರ್, ನಳಿನಿ ಶ್ರೀಧರ್ ಪ್ರೀತಿ ಆರ್. ರಾವ್
ಆಯ್ಕೆಯಾದರು. ಸವಿತಾ ಜಯದೇವ್ ಸ್ವಾಗತಿಸಿ,
ಆಶಾ ಸತೀಶ್ ವಾರ್ಷಿಕ ವರದಿ ವಾಚಿಸಿ, ಉಷಾ ಲಕ್ಷ್ಮಣ ಗೌಡ ಲೆಕ್ಕಪತ್ರ ಮಂಡಿಸಿದರು. ವಿನೋದಿನಿ ರಾಮಪ್ಪ ವಂದಿಸಿದರು.

Exit mobile version