ಉಜಿರೆ: ಶ್ರೀ ವ್ಯಾಘ್ರ ಚಾಮುಂಡಿ ಸೇವಾ ಟ್ರಸ್ಟ್ ಚಾಮುಂಡಿನಗರ ಓಡಲ ಮತ್ತು ಬಾಲ ಗೋಕುಲ ಸಮಿತಿ ಉಜಿರೆ ಇವರ ಜಂಟಿ ಆಶಯದಲ್ಲಿ ಜು. 6ರಂದು ಶ್ರೀ ಚಾಮುಂಡೇಶ್ವರಿ ಬಾಲಗೋಕುಲ ಕೇಂದ್ರ ಉದ್ಘಾಟನೆ ನಡೆಯಿತು.
ಶ್ರೀ ವ್ಯಾಘ್ರ ಚಾಮುಂಡೇಶ್ವರಿ ಟ್ರಸ್ಟಿನ ಅಧ್ಯಕ್ಷ ಸೀತಾರಾಮ ಶೆಟ್ಟಿ ಉದ್ಘಾಟಿಸಿದರು. ಜಿಲ್ಲಾ ಪ್ರಮುಖ ವಿಜಯ ಕುಮಾರ್ ಅರಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ವರಿ ಚಂದ್ರಕಾಂತ್ ಕೇಂದ್ರವನ್ನು ಸಂಘಟಿಸಿ ಔಚಿತ್ಯ ವಿವರಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ವ್ಯಾಘ್ರ ಚಾಮುಂಡಿ ಸೇವಾ ಟ್ರಸ್ಟಿನ ಕಾರ್ಯದರ್ಶಿ ಪರಮೇಶ್ವರ, ಟ್ರಸ್ಟಿನ ಸದಸ್ಯರಾದ ಶ್ರೀನಿವಾಸ್ ಗೌಡ, ಮಧುರ, ವಿದ್ಯಾ ಕುಮಾರ್ ಕಾಂಚೋಡು, ಅಣ್ಣಿ ಗೌಡ ಉಪಸ್ಥಿತರಿದ್ದರು. ಪ್ರಮುಖರಾದ ರಾಮದಾಸ್ ಭಂಡಾರ್ಕರ್, ಜಯರಾಮ ಶೆಟ್ಟಿ ಕೆಂಬರ್ಜಿ, ಚೇತನ್ ಉಪಸ್ಥಿತರಿದ್ದರು. ಅಕ್ಷತಾ ರವಿ ಕೆದ್ಲ, ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು. ನಿರ್ಮಲ ಸುರೇಶ್ ಆಚಾರ್ ಸ್ವಾಗತಿಸಿದರು. ಶ್ರೀದೇವಿ ಚಾಮುಂಡಿ ನಗರ ಕಾರ್ಯಕ್ರಮ ನಿರೂಪಿಸಿದರು. ಶಶಿಕಲಾ ಧನ್ಯವಾದ ಸಮರ್ಪಿಸಿದರು.