ಬೆಳ್ತಂಗಡಿ: ಸಂಪತ್ತು ಕೂಡಿಟ್ಟು ಕೊನೇಗೆ ಒಂದು ದಿನ ಸೇವೆ ಮಾಡುತ್ತೇವೆ ಎಂಬುದಾಗಿ ಯಾರಿಂದಲೂ ಮಾಡಲು ಸಾಧ್ಯವಿಲ್ಲ. ಇರುವ ಸಂಪತ್ತಿನಲ್ಲಿ ಅರ್ಹರು ಕಂಡ ತಕ್ಷಣ ಸೇವೆ ನೀಡುವ ಮೂಲಕ ಆದರ್ಶ ಮೆರೆಯಬೇಕು. ಅದಕ್ಕೆ ಲಯನ್ಸ್ ಕ್ಲಬ್ ಉತ್ತಮ ವೇದಿಕೆ ಎಂದು ಲಯನ್ಸ್ ಜಿಲ್ಲಾ ದ್ವಿತೀಯ ಉಪರಾಜ್ಯಪಾಲ ಗೋವರ್ಧನ ಕೆ ಶೆಟ್ಟಿ ಹೇಳಿದರು.
ಲಯನ್ಸ್ ಕ್ಲಬ್ ಬೆಳ್ತಂಗಡಿ ನೂತನ ಅಧ್ಯಕ್ಷ ನ್ಯಾಯವಾದಿ ಮುರಳಿ ಬಲಿಪ, ಕಾರ್ಯದರ್ಶಿ ಅಮಿತಾನಂದ ಹೆಗ್ಡೆ, ಕೋಶಾಧಿಕಾರಿ ಸುಭಾಷಿಣಿ ಅವರ ನೂತನ ತಂಡಕ್ಕೆ ಪದಪ್ರದಾನ ಮಾಡಿ ಅವರು ಮಾತನಾಡಿದರು.
ಅಧಿಕಾರ ವಹಿಸಿ ಮಾತನಾಡಿದ ಮುರಳಿ ಬಲಿಪ ಈ ವರ್ಷ ನಮ್ಮ ತಂಡ ನೀರಿನ ಸದ್ಭಳಕೆ, ಮರುಪೂರಣ, ಸರಕಾರಿ ಶಾಲೆ ಪುನರುಜ್ಜೀವನ ಮತ್ತು ಎಂಡೋ ಬಾಧಿತರಿಗೆ ನೆರವು ಈ ಮೂರು ಪ್ರಮುಖ ಸೇವಾ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ. ಜಲಕ್ಷ್ಯಾಮ ನಿವಾರಣೆಗೆ ಪಣ ತೊಟ್ಟು ಕನಿಷ್ಟ 50 ಕೊಳವೆ ಬಾವಿಯನ್ನು ಮರುಪೂರಣಗೊಳಿಸಲಾಗುವುದು ಎಂದರು. ನಿರ್ಗಮನಾಧ್ಯಕ್ಷ ದೇವದಾಸ ಶೆಟ್ಟಿ ಹಿಬರೋಡಿ ಮಾತನಾಡಿ, ಯಕ್ಷೋತ್ಸವ, ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನ ಜಾಗೃತಿ, 7 ಕಡೆ ತಂಗುದಾಣಗಳ ನಿರ್ಮಾಣ ಮೊದಲಾದ ಕಾರ್ಯಗಳೂ ಸೇರಿದಂತೆ 50 ಲಕ್ಷಕ್ಕೂ ಅಧಿಕ ಮೌಲ್ಯದ ವಿವಿಧ ಸೇವೆಗಳನ್ಮು ಅಭೂತಪೂರ್ವವಾಗಿ ನಡೆಸಲಾಗಿದೆ.
ಈ ಬಗ್ಗೆ ತೃಪ್ತಿ ಇದೆ. ಈ ಸೇವಾ ಯಾನ ಇಲ್ಲಿಗೇ ಕೊನೆಯಾಗುದಿಲ್ಲ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲು ಪ್ರತ್ಯೇಕ ಟ್ರಸ್ಟ್ ರಚಿಸಿ ವಾರ್ಷಿಕ 10 ಲಕ್ಷ ರೂ. ಯೋಜನೆ ರೂಪಿಸಲಾಗುವುದು ಎಂದರು.
ನಿಕಟ ಪೂರ್ವ ಕಾರ್ಯದರ್ಶಿ ಲಯನ್ ಕಿರಣ್ ಕುಮಾರ್ ಶೆಟ್ಟಿ ವರದಿ, ಕೋಶಾಧಿಕಾರಿ ಲೆಕ್ಕಪತ್ರ ನೀಡಿದರು. ಲಿಯೋ ಕ್ಲಬ್ ಅಧ್ಯಕ್ಷೆ ಅಪ್ಸರಾ ಎಚ್.ಆರ್. ಗೌಡ, ಕೋಶಾಧಿಕಾರಿ ಅಭಿಜ್ಞಾ ಬೊಲ್ಮ, ಪ್ರಾಂತೀಯ ಅಧ್ಯಕ್ಷ ಜಗದೀಶ್ ಚಂದ್ರ ಡಿ ಕೆ, ವಲಯ ಅಧ್ಯಕ್ಷ ಜೊಸ್ಸಿ ಮಿನೇಜಸ್, ವಿವಿಧ ಕ್ಲಬ್ ಗಳ ಅಧ್ಯಕ್ಷರುಗಳಾದ ಮೂಡಬಿದ್ರೆಯ ಶಿವಪ್ರಸಾದ್ ಹೆಗ್ಡೆ, ವೇಣೂರಿನ ಸುಧೀರ್ ಭಂಡಾರಿ, ಮುಚ್ಚುರು ನೀರುಡೆಯ ಮುರಳಿದಾಸ್ ಕೆ., ಅಲಂಗಾರಿನ ಅಮಿತ್ ಡಿಸಿಲ್ವ, ಗುರುಪುರ ಕೈಕಂಬದ ಲಯನ್
ಜೇಸನ್ ಪೀಟರ್, ಬಪ್ಪನಾಡು ಇನ್ಸ್ಪೈರ್‌ನ ಅನಿಲ್ ಕುಮಾರ್,
ಸುಲ್ಕೇರಿಯ ಪ್ರಶಾಂತ್ ಶೆಟ್ಟಿ ಬೊಳ್ಳಿಮಾರು, ಬೆಳುವಾಯಿಯ ಜಾನೆಟ್ ಉಪಸ್ಥಿತರಿದ್ದರು.
ಧರಣೇಂದ್ರ ಕೆ ಜೈನ್ ಕಾರ್ಯಕ್ರಮ ನಿರೂಪಿಸಿದರು. ನೂತನ ಕೋಶಾಧಿಕಾರಿ ಸುಭಾಷಿಣಿ ಧನ್ಯವಾದ ಸಲ್ಲಿಸಿದರು.