Site icon Suddi Belthangady

ಮಿತ್ತಬಾಗಿಲು: ಜಾನುವಾರು ಮಾಂಸ ಮಾರಾಟ ಪತ್ತೆ-ಈರ್ವರ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ: ಮಿತ್ತಬಾಗಿಲು ಗ್ರಾಮದ ಕಾಜೂರು ಎಂಬಲ್ಲಿ ಜು.2ರಂದು ಮಲವಂತಿಗೆ ಗ್ರಾಮದ ಅಬ್ದುಲ್‌ ರಜಾಕ್‌ (28) ಎಂಬವರಿಗೆ ಸಂಬಂಧಪಟ್ಟ ಅಂಗಡಿಯಲ್ಲಿ ಯಾವುದೇ ಪರವಾನಿಗೆ ಹೊಂದದೆ ಅಕ್ರಮವಾಗಿ ಜಾನುವಾರಿನ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಅಂಗಡಿಯೊಳಗೆ ಶೇಖರಿಸಿಟ್ಟಿರುವ ಬಗ್ಗೆ ಪ್ರಕೆಣ ದಾಖಲಾಗಿದೆ.

ಎಸ್.ಐ. ಯಲ್ಲಪ್ಪ ಹೆಚ್‌. ಮಾದರ ಅವರು ಸಿಬ್ಬಂದಿಗಳೊಂದಿಗೆ ತೆರಳಿ ಪರಿಶೀಲಿಸಿದಾಗ ಒಟ್ಟು 47 ಕೆ.ಜಿ. ದನ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಅಂಗಡಿಯೊಳಗೆ ಪ್ರಿಡ್ಜ್‌ ನೊಳಗೆ ಇರಿಸಿರುವುದು ಕಂಡುಬಂದಿದೆ.

ಈ ಸೊತ್ತುಗಳನ್ನು ಮುಂದಿನ ಕಾನೂನುಕ್ರಮಕ್ಕಾಗಿ ಸ್ವಾಧೀನಪಡಿಸಿ ಅಬ್ದುಲ್‌ ರಜಾಕ್‌ ಹಾಗೂ ಅಂಗಡಿಯಲ್ಲಿದ್ದ ಮಲವಂತಿಗೆಯ ಅಬ್ದುಲ್‌ ರವೂಫ್ (20(ಎಂಬವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ: 51/2025, ಕಲಂ: 4, 12 ಕರ್ನಾಟಕ ಗೋವಧೆ ಪ್ರತಿಬಂದಕ ಮತ್ತು ಜಾನುವಾರು ಸಂರಕ್ಷಣಾ ಅದಿನಿಯಮ 2022ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ವಧೆ ಮಾಡಲಾದ ಜಾನುವಾರಿನ ಬಗ್ಗೆ ವಿಚಾರಿಸಲಾದ ವೇಳೆ ಸಹೋದರರಾದ ಆರೋಪಿಗಳು ಅವರ ಮನೆಯಲ್ಲಿ ಸಾಕಿದ್ದ ಜಾನುವಾರನ್ನು ವಧೆ ಮಾಡಿ, ಮಾಂಸ ಮಾರಾಟಕ್ಕೆ ಯತ್ನಿಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

Exit mobile version