Site icon Suddi Belthangady

ಟೀಂ ಅಭಯಹಸ್ತ ಬೆಳ್ತಂಗಡಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ-ಕಲಿಕಾ ಸಾಮಾಗ್ರಿ ವಿತರಣೆ

ಬೆಳ್ತಂಗಡಿ: ಸೇವೆ ಸಂಘಟನೆ ಸಾಮರಸ್ಯದ ಧ್ಯೇಯದೊಂದಿಗೆ 2018ರಿಂದ ಸಮಾಜಮುಖಿಯಾಗಿ ಕಾರ್ಯಾಚರಿಸುತ್ತಿರುವ ಟೀಂ ಅಭಯಹಸ್ತ ಚ್ಯಾರಿಟೇಬಲ್ ಸ್ಪೋರ್ಟ್ಸ್/ಕಲ್ಚರಲ್ ಕ್ಲಬ್ ಬೆಳ್ತಂಗಡಿಯಿಂದ ಬಡ ಕೌಟುಂಬಿಕ ಹಿನ್ನೆಲೆಯ ಅರ್ಹ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಸಂಘಟನೆಯ ಪ್ರಧಾನ ಸಂಚಾಲಕ ಸಂದೀಪ್ ಎಸ್. ನೀರಲ್ಕೆ ಅರ್ವ ಅವರ ಸಲಹೆಯಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ವಿತರಣಾ ಪ್ರಕ್ರಿಯೆಯನ್ನು ನೆರವೇರಿಸಿದರು. ವಿವಿಧ ಸಮಾಜಮುಖಿ ಸಂಘ ಸಂಸ್ಥೆಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಗಣ್ಯರು ನೀಡಿದ ಅರ್ಹರ ಪಟ್ಟಿಯನ್ನು ಪರಿಗಣಿಸಿ ಯೋಜನೆಯನ್ನು ಕಾರ್ಯಗತಗೊಳಿಸಲಾಯಿತು.

Exit mobile version