ಪುದುವೆಟ್ಟು:ಮಿಯ್ಯಾರು ಶ್ರೀ ವನದುರ್ಗಾ ದೇವಸ್ಥಾನದಲ್ಲಿ ನಡೆದ ರಂಗಪೂಜೆಯಲ್ಲಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭಾಗವಹಿಸಿದರು. ದೇವಸ್ಥಾನ ವತಿಯಿಂದ ಅವರನ್ನು ಗೌರವಿಸಲಾಯಿತು. ದೇವಸ್ಥಾನದ ಅನ್ನಛತ್ರಕ್ಕೆ ಅನುದಾನ ಒದಗಿಸುವ ಬಗ್ಗೆ ಮನವಿ ಪತ್ರವನ್ನು ವ್ಯವಸ್ಥಾಪನ ಸಮಿತಿಯವರು ನೀಡಿದರು. ಆಗಮಿಸಿದ್ದ ಕೆ.ಪಿ.ಸಿ.ಸಿ ಮಹಿಳಾ ಪ್ರಧಾನ ಕಾರ್ಯದರ್ಶಿ ನಮಿತಾ ಕೆ. ಪೂಜಾರಿ ಮತ್ತು ಸೌತಡ್ಕ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಪ್ರಶಾಂತ್ ಮಚ್ಚಿನ ಅವರನ್ನು ಗೌರವಿಸಲಾಯಿತು.
ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬೊಮ್ಮನಗೌಡ ಮಠ ಕಾರ್ಯದರ್ಶಿಯಾದ ಸಂತೋಷ ಕೆ.ಸಿ., ಕೋಶಾಧಿಕಾರಿ ಶಾಜು ಕೆ.ಆರ್., ಉಪಾಧ್ಯಕ್ಷ ಜನಾರ್ಧನ್ ದರ್ಕಾಸ್, ಉಪ ಕಾರ್ಯದರ್ಶಿ ಶುಭನಿತ ಯೋಗೀಶ್ ಗೌಡ, ಸದಸ್ಯರಾದ ಹರಿನಾಕ್ಷಿ, ರಾಘವ ಪೂಜಾರಿ, ಸೋಮನಾಥ್ ಗೌಡ ಮುಳಿಮಜಲು, ನಾರಾಯಣ ನಾಯ್ಕ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.