ಬೆಳ್ತಂಗಡಿ: ಹಲವು ಠಾಣೆಗಳಿಗೆ ಮತ್ತು ಹೊರ ಜಿಲ್ಲಾ ಠಾಣೆಗಳಿಗೆ ಬೇಕಾಗಿದ್ದ ಕುಖ್ಯಾತ ಗಾಂಜಾ ಪಡ್ಲೆರ್ ಕುವೆಟ್ಟು ಗ್ರಾಮದ ಅಬೂಬಕ್ಕರ್ ಸಿದ್ದಿಕ್ ಎಂಬಾತನನ್ನು ಕಳೆದ ರಾತ್ರಿ ಬೆಳ್ತಂಗಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಇನ್ಸ್ ಪೆಕ್ಟರ್ ಸುಬ್ಬಾಪೂರ್ ಮಠ್ ಹಾಗು ಪಿ.ಎಸ್.ಐ ಯಲ್ಲಪ್ಪ ಅವರ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಹೆಡ್ ಕಾನ್ಸ್ ಟೇಬಲ್ ಮಾಲತೇಶ್ ಹಾಗು ಪಿ.ಸಿ. ಮುನಿಯಪ್ಪ ನಾಯ್ಕ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುಖ್ಯಾತ ಗಾಂಜಾ ಪಡ್ಲೆರ್ ಅಬೂಬಕ್ಕರ್ ಸಿದ್ದಿಕ್ ಅರೆಸ್ಟ್
