Site icon Suddi Belthangady

ಕಳೆಂಜ: ಬಿರುಕು ಬಿಟ್ಟ ಗೋಡೆ: ಶೌರ್ಯ ತಂಡದಿಂದ ನೆರವು

ಬೆಳ್ತಂಗಡಿ: ತಾಲೂಕಿನ ಕಳೆಂಜ ಗ್ರಾಮದ ಶಿಬರಾಜೆ ಬೈಲು ನೆಕ್ಕರಾಜೆ ಅಣ್ಣು ಗೌಡರ ಕಟ್ಟಿಗೆ ದಾಸ್ತಾನು ಹಾಗೂ ಬಚ್ಚಲು ಮನೆಯ ಮಣ್ಣಿನ ಗೋಡೆಯು ಜು.4ರಂದು ರಾತ್ರಿ ಸುರಿದ ಮಳೆಗೆ ಅಪಾಯಕಾರಿಯಾಗಿ ಬಿರುಕು ಬಿಟ್ಟು ನಿಂತಿತ್ತು.

ಮನೆಯವರ ಕರೆಯ ಮೇರೆಗೆ ಸ್ಥಳಕ್ಕೆ ತೆರಳಿದ ಅರಸಿನಮಕ್ಕಿ ಶಿಶಿಲ ಶೌರ್ಯ ಸ್ವಯಂಸೇವಕರಾದ ಅವಿನಾಶ್ ಭಿಡೆ, ಕುಶಾಲಪ್ಪ ಗೌಡ, ಹರೀಶ್ ವಳಗುಡ್ಡೆ, ಧನಂಜಯ ಗೌಡ, ಯೋಗೀಶ್ ಸೀಂಬೂಲು, ಕಾರ್ತಿಕ್ ಎಂ.ಬಿ., ರಮೇಶ ಬೈರಕಟ್ಟ ಅವರು ಬಿದ್ದು ಹಾನಿಯಾಗಬಹುದಾದ ಮೇಲ್ಛಾವಣಿಯ ಸಿಮೆಂಟ್ ಶೀಟ್ ಗಳನ್ನು ಎಚ್ಚರಿಕೆಯಿಂದ ತೆಗೆದು ಸಂಭಾವ್ಯ ಅಪಾಯವನ್ನು ತಡೆಗಟ್ಟಲು ಬಿರುಕು ಬಿಟ್ಟಿದ್ದ ಗೋಡೆಯನ್ನು ತೆರವುಗೊಳಿಸಿದರು. ಮತ್ತು ಮಳೆಗಾಲದ ಕಟ್ಟಿಗೆ ದಾಸ್ತಾನಿಗೆ ಟಾರ್ಪಾಲು ಹೊದಿಸಿದರು.

Exit mobile version