Site icon Suddi Belthangady

ಮೊಗ್ರು: ಸ. ಶಾಲೆಯಲ್ಲಿ ಆಂಗ್ಲ ಮಾಧ್ಯಮ (ದ್ವಿ ಭಾಷಾ)ಶಿಕ್ಷಣ ನೀಡಲು ಅನುಮತಿ

ಮೊಗ್ರು: ಸರಕಾರಿ ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ಮೊಗ್ರು ಮುಗೇರಡ್ಕ ಇದರಿಂದ ದತ್ತು ಸ್ವೀಕರಿಸಲ್ಪಟ್ಟ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊಗ್ರು, ಬೆಳ್ತಂಗಡಿ ಇಲ್ಲಿ ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯ ಅನುಮೋದನೆಯೊಂದಿಗೆ 2024-2025ರ ಶೈಕ್ಷಣಿಕ ಅವಧಿಯ 1ನೇ ತರಗತಿಯ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದಲ್ಲಿ (English Medium)ದ್ವಿ ಭಾಷಾ ಶಿಕ್ಷಣ ನೀತಿಯಲ್ಲಿ ಶಿಕ್ಷಣ ನೀಡಲು ಅನುಮತಿಯನ್ನು ಶಿಕ್ಷಣ ಇಲಾಖೆ ಹೊರಡಿಸಿದೆ. ಕಿರಿಯ ಪ್ರಾಥಮಿಕ ಶಾಲೆ ಮೊಗು ಇದನ್ನು ದತ್ತು ಸ್ವೀಕಾರ ಮಾಡಿದ ಮುಗೇರಡ್ಕ ಸರಕಾರಿ ಶಾಲಾ ಟ್ರಸ್ಟ್ ಈಗಾಗಲೇ ಶಾಲೆಗೆ ಬೇಕಾದ ಇಬ್ಬರು ಆಂಗ್ಲ ಭಾಷಾ ಶಿಕ್ಷಣ ನೀಡುವ ಅನುಭವಿ ಶಿಕ್ಷಕಿಯರನ್ನು ನೇಮಕ ಮಾಡಿದ್ದು, ಶಾಲೆಗೆ ಬೇಕಾದ ಪೀಠೋಪಕರಣ ಹಾಗೂ ಇನ್ನಿತರ ಮೂಲಭೂತ ಸೌಲಭ್ಯ ಶಾಲೆಗೆ ಬೇಕಾದ ಇಬ್ಬರು ಆಂಗ್ಲ ಭಾಷಾ ಶಿಕ್ಷಣ ನೀಡುವ ಅನುಭವಿ ಶಿಕ್ಷಕಿಯರನ್ನು ನೇಮಕ ಮಾಡಿದ್ದು, ಶಾಲೆಗೆ ಬೇಕಾದ ಪೀಠೋಪಕರಣ ಹಾಗೂ ಇನ್ನಿತರ ಮೂಲಭೂತ ಸೌಲಭ್ಯ ಒದಗಿಸುತ್ತಿದೆ. ಟ್ರಸ್ಟ್‌ನ ನೇತೃತ್ವದಲ್ಲಿ ಶಾಲಾ ವಾಹನ ಸೌಲಭ್ಯವನ್ನು ಒದಗಿಸಿದೆ.

ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಣ ಅನುಮತಿ ಪಡೆಯುವ ಪ್ರಯತ್ನವನ್ನು ಟ್ರಸ್ಟ್‌ನ ಅಧ್ಯಕ್ಷ ಕುಶಾಲಪ್ಪ ಗೌಡ ನೆಕ್ಕರಾಜೆ ವಹಿಸಿದ್ದು, ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಸಾಥ್ ನೀಡಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಸಹಕರಿಸಿದರು. ಟ್ರಸ್ಟ್‌ನ ಕಾರ್ಯದರ್ಶಿ ಮನೋಹರ ಅಂತರ, ಕೋಶಾಧಿಕಾರಿ ಪುರಂದರ ನ್ಯಾಮಾರು, ಪಂಚಾಯತ್ ಸದಸ್ಯ ಟ್ರಸ್ಟ್ರಿ ಬಾಲಕೃಷ್ಣ ಮುಗೇರಡ್ಕ, ಟ್ರಸ್ಟಿ ಚಂದಪ್ಪ ಡಿ. ಎಸ್. ಟ್ರಸ್ಟಿ ಪ್ರದೀಪ್, ಶಾಲಾ ಪ್ರಬಾರ ಮುಖೋಪಾಧ್ಯಾಯ ಮಾಧವ ಗೌಡ, ನಿಕಟಪೂರ್ವ ಎಸ್.ಡಿ.ಎಂ.ಸಿ ಅಧ್ಯಕ್ಷ ಶೀನಪ್ಪ ಗೌಡ ನೆಕ್ಕರಜೆ ಸಹಕರಿಸಿದರು.

ಈ ವರ್ಷ ಆಂಗ್ಲ ಭಾಷಾ ಮಾಧ್ಯಮದಲ್ಲಿ ಶಿಕ್ಷಣ ಪಡೆಯಲು ಮಕ್ಕಳಿಗೆ ಅವಕಾಶವಿದ್ದು ಶಾಲೆಗೆ ಪ್ರವೇಶ ಪಡೆಯಬಹುದು.

ಸಂಪರ್ಕಿಸಿ: 9480004379, 9845588740

Exit mobile version