ಬೆಳಾಲು: ಕೊಲ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ.ಯನ್ನು ಪುನರ್ ರಚನೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಹರೀಶ್ ಪೂಜಾರಿ ಕೆರೆಕೋಡಿ, ಉಪಾಧ್ಯಕ್ಷೆಯಾಗಿ ತೀರ್ಥಲತಾ ಆಯ್ಕೆಯಾದರು. ಉಳಿದಂತೆ ಪೋಷಕರಾದ ಗುಲಾಬಿ, ಕುಸುಮ ಕೂಡಿಗೆ, ಶಶಿಕಲಾ, ಸುಮಲತಾ, ಚೆನ್ನಪ್ಪ ಗೌಡ, ಹರೀಶ ಗೌಡ, ಉದಯ ಆಚಾರ್ಯ, ಶಶಿಕಲಾ ಕಲ್ಕೊಟೆ, ಆಶಾ, ಸುಲೋಚನಾ, ಲಕ್ಷ್ಮಣ, ಸಂಧ್ಯಾ, ರೇಷ್ಮಾ ಪಿ.ಎಸ್., ಸವಿತಾ, ಪುಷ್ಪಾ ಆಯ್ಕೆಯಾದರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಮಾಧವ ಗೌಡ,ಉಪಾಧ್ಯಕ್ಷೆ ಲೇಖಾವತಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸುರೇಶ್ ಎಂ ಆಯ್ಕೆ ಪ್ರಕ್ರಿಯೆಯನ್ನು ನಡೆಸಿದರು. ಶಿಕ್ಷಕರಾದ ದಿನೇಶ ಕೆ. ಕರಿಯಣ್ಣ ಸಹಕರಿಸಿದರು.
ಕೊಲ್ಪಾಡಿ: ಸ.ಕಿ.ಪ್ರಾ. ಶಾಲೆಯ ಎಸ್.ಡಿ.ಎಂ.ಸಿ. ರಚನೆ
