ವೇಣೂರು: ತುರ್ತು ಕರೆಗೆ ಸ್ಪಂದಿಸಿದ ಶಾಸಕ ಹರೀಶ್ ಪೂಂಜ, ಲೋಕೋಪಯೋಗಿ ಇಂಜಿನಿಯರ್ ಶಿವಕುಮಾರ್, ಮುಗೆರೋಡಿ ಸಂಸ್ಥೆಯ ಉದಯ, ಗರ್ಡಾಡಿಯಿಂದ ವೇಣೂರು ಮುಖ್ಯ ರಸ್ತೆಯಲ್ಲಿ ಮಳೆ ನೀರು ಹರಿದು ವಾಹನ ಸವಾರರಿಗೆ ಆಗುತ್ತಿರುವ ಸಮಸ್ಯೆಯನ್ನು ಗಮನಕ್ಕೆ ತಂದಾಗ ಕೂಡಲೇ ಜೆಸಿಬಿ ಹಾಗೂ ಟಿಪ್ಪರ್ ವ್ಯವಸ್ಥೆಯನ್ನು ಮಾಡಿ ಸಕಾಲಕ್ಕೆ ಸ್ಪಂದಿಸಿದರು. ಪಡಂಗಡಿ ಸಿ.ಎ.ಬ್ಯಾಂಕ್ ನಿರ್ದೇಶಕ ಕೃಷ್ಣಪ್ಪ ಪೂಜಾರಿ, ಕಾರ್ಯದರ್ಶಿ ಯಾದವ ಕೋಟ್ಯಾನ್, ಮಂಜು ಪ್ರಸಾದ್, ಶಕ್ತಿ ಕೇಂದ್ರ ಪ್ರಮುಖ್ ದಿನಕರ ಕುಲಾಲ್ ಸಹಕರಿಸಿದರು.
ಗರ್ಡಾಡಿ-ವೇಣೂರು ಮುಖ್ಯ ರಸ್ತೆ ದುರಸ್ತಿ
