ಸುಲ್ಕೇರಿ: ಇತ್ತೀಚೆಗೆ ಸುರಿದ ಭಾರಿ ಮಳೆಗೆ ಮುಳ್ಳಗುಡ್ಡೆ ನಿವಾಸಿ ಅಣ್ಣು ಪೂಜಾರಿ ಅವರ ಮನೆ ಸಂಪೂರ್ಣ ಕುಸಿದು ಬಿದ್ದಿರುತ್ತದೆ. ಈ ಬಗ್ಗೆ ಪರಿಶೀಲನೆಗಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ನಾವರ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಎನ್. ವೀರೇಂದ್ರ ಕುಮಾರ್ ಜೈನ್, ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿಯ ಸದಸ್ಯ ವಾಸುದೇವ ರಾವ್, ತಾಲೂಕು ಆರೋಗ್ಯ ರಕ್ಷಾ ಸಮಿತಿಯ ಸದಸ್ಯೆ ಸವಿತಾ, ಕೊರಗಪ್ಪ ಪೂಜಾರಿ ಮಣಿಕಂಠ ನಿವಾಸ ಸುಲ್ಕೇರಿ ಹಾಗೂ ಜಯಾನಂದ ಸುಲ್ಕೇರಿ ಅವರು ಭೇಟಿ ನೀಡಿರುತ್ತಾರೆ.
ಮುಳ್ಳಗುಡ್ಡೆ: ಅಣ್ಣು ಪೂಜಾರಿ ಅವರ ಮನೆಗೆ ರಕ್ಷಿತ್ ಶಿವರಾಂ ಮತ್ತು ಅಧಿಕಾರಿಗಳ ಭೇಟಿ
