Site icon Suddi Belthangady

ಭಾರೀ ಗಾಳಿಗೆ ಲಾಯಿಲದಲ್ಲಿ ಮನೆಗಳಿಗೆ ಹಾನಿ

ಬೆಳ್ತಂಗಡಿ: ತಾಲೂಕಿನಲ್ಲಿ ಭಾರೀ ಮಳೆ ಮುಂದುವರಿದಿದ್ದು ಜು.2ರಂದು ಮಧ್ಯಾಹ್ನ ಬೀಸಿದ ಭಾರೀ ಗಾಳಿಗೆ ಲಾಯಿಲ ಗ್ರಾಮದ ಅಂಕಾಜೆ ನಿನ್ನಿಕಲ್ಲು ಎಂಬಲ್ಲಿಯ ಜೋಕಿಂ ಸಿಕ್ಚರ ಅವರ ಮಾಲಕತ್ವದ ಎರಡು ಬಾಡಿಗೆ ಮನೆಯ ಛಾವಣಿ ಸಂಪೂರ್ಣವಾಗಿ ಹಾನಿಗೀಡಾಗಿದೆ.

ಈ ಕಟ್ಟಡದಲ್ಲಿ ಬಾಡಿಗೆದಾರರು ವಾಸವಾಗಿದ್ದರು. ಗಾಳಿಯಿಂದಾಗಿ ಮೇಲ್ಬಾವಣಿ ಹಾರಿ ಹೀಗಿದ್ದು ಇಲ್ಲಿ ವಾಸಿಸುತ್ತಿದ್ದ ಬಾಡಿಗೆದಾರರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಯಾವುದೇ ಜೀವ ಹಾನಿಯಾಗಿರುವುದಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ರಿಯವರನ್ನು ಸಂಬಂಧಿಕರ ಮನೆಗಳಿಗೆ ಹೋಗಲು ಸೂಚನೆ ನೀಡಲಾಗಿದೆ.

Exit mobile version