Site icon Suddi Belthangady

ಕನ್ಯಾಡಿ ಸ.ಉ.ಪ್ರಾ.ಶಾಲಾ ಮಂತ್ರಿ ಮಂಡಲಕ್ಕೆ ಆಯ್ಕೆ

ಕನ್ಯಾಡಿ 2: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಮಕ್ಕಳ ಮಂತ್ರಿಮಂಡಲದ ಪ್ರಮಾಣವಚನ ಸ್ವೀಕಾರ ಸಮಾರಂಭವು ಜರಗಿತು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪುಷ್ಪಾ ಎನ್. ನೇತೃತ್ವದಲ್ಲಿ ನಡೆಯಿತು.

ಹೊಸದಾಗಿ ಆಯ್ಕೆಯಾದ ಶಾಲಾ ವಿದ್ಯಾರ್ಥಿಗಳ ನಾಯಕಿ ಅನನ್ಯ 8ನೇ, ಉಪ ನಾಯಕ ಕುಮಾರ್ ಸುಹಾಸ್ 7ನೇ ಹಾಗೂ ಮಂತ್ರಿಮಂಡಲದ ಸರ್ವ ಸದಸ್ಯರು ಪ್ರಮಾಣವಚನವನ್ನು ಸ್ವೀಕರಿಸಿದರು. ಶಾಲೆಯ ಕರ್ತವ್ಯ, ಶಿಸ್ತು, ಜವಾಬ್ದಾರಿ ಸರಿಯಾಗಿ ನಿಭಾಯಿಸುವುದಾಗಿ ಪ್ರತಿಜ್ಞೆ ಮಾಡಿದರು. ಸಹ ಶಿಕ್ಷಕಿ ಶಾರದಾ ನಿರ್ವಹಿಸಿದರು. ಶಾಲಾ ಶಿಕ್ಷಕ ವೃಂದದವರು. ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಉಪಸ್ಥಿತರಿದ್ದರು.

Exit mobile version