ಕಲ್ಮಂಜ: ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಡಿಗಲ್ ಸೇತುವೆಯ ಹತ್ತಿರದ ಹಳೆಯ ಪೋಸ್ಟ್ ಆಫೀಸ್ ಸಮೀಪ ರಸ್ತೆಯ ಬದಿಯಲ್ಲಿ ಓಮಿನಿ ಕಾರು ಇಂದು ಸುರಿದ ಧಾರಾಕಾರ ಮಳೆಗೆ ರಸ್ತೆ ಬದಿಯಲ್ಲಿ ಹಾಕಿರುವ ಮಣ್ಣು ಕುಸಿದು ಕಾರು ಹಳ್ಳಕ್ಕೆ ಬಿದ್ದಿರುವ ಘಟನೆ ಜು.2ರಂದು ರಾತ್ರಿ ನಡೆದಿದೆ.
ಕಾರಿನಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ತಕ್ಷಣ ಸ್ಥಳೀಯರು ರಕ್ಷಿಸಿದ್ದಾರೆ.