ಪಾರೆಂಕಿ: ಅಭಿಲಾಷ್ ಅಪಘಾತದಿಂದ ಬ್ರೈನ್ ಟ್ಯೂಮರ್ ವ್ಯಕ್ತಿಯ ಕುಟುಂಬಕ್ಕೆ ಮಿತ್ರ ಬಳಗ ಗೋವಿಂದೂರು ಯುವಕರ ತಂಡ ಭೇಟಿಯಾಗಿ ಜು.1ರಂದು ಅರ್ಥಿಕ ನೆರವು ನೀಡಿದರು. ಪಾರೆಂಕಿ ಗ್ರಾಮದ ಬಂಗೇರು ಕಟ್ಟೆ ಸಾಲುಮರ ನಿವಾಸಿ ಸುಮಲ ಪುತ್ರ ಅಭಿಲಾಷ್ (28 ವರ್ಷ) ಸಿವಿಲ್ ಇಂಜಿನಿಯರ್ ಶಿಕ್ಷಣ ಪಡೆದಿದ್ದಾರೆ.
ಕಳೆದ 2019 ಡಿ. ತಿಂಗಳಲ್ಲಿ ಪಡುಬಿದ್ರೆ ಪೇಟೆಯಲ್ಲಿ ತನ್ನ ಬೈಕ್ ಚಲಾಯಿಸಿಕೊಂಡು ಹೋಗುವ ಮಾರ್ಗದಲ್ಲಿ ಹಿಂದಿನಿಂದ ವೇಗವಾಗಿ ಬಂದಿರುವ ವಾಹನ ಡಿಕ್ಕಿ ಹೊಡೆದು ರಸ್ತೆ ಡಿವೈಡರ್ ಗೆ ಅಪ್ಪಳಿಸಿ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕ್ರಮೇಣವಾಗಿ ಆರೋಗ್ಯದಲ್ಲಿ ಚೇತರಿಕೆಯಾಗಿದ್ದರು. ಕೆಲವು ಸಮಯದ ನಂತರ ಮತ್ತೆ ಉದ್ಯೋಗ ಮಾಡುತ್ತಿರುವ ಸ್ಥಳಗಳಲ್ಲಿ ಕೆಲವೊಮ್ಮೆ ಇದ್ದಕ್ಕಿದ್ದಂತೆ ಬೀಳುವುದರಿಂದ ಮೂರ್ಛೆ ಕಾಯಿಲೆ ರೋಗದ ಲಕ್ಷಣ ಕಂಡುಬರುತ್ತಿತ್ತು.
ನಂತರ ತಾಯಿ ಸುಮಲ ನುರಿತ ವೈದ್ಯರನ್ನು ಭೇಟಿ ನೀಡಿ ಪರೀಕ್ಷಿಸಿದಾಗ ಬ್ರೈನ್ ಟ್ಯೂಮರ್ ಆಗಿದೆ ಎಂದು ವೈದ್ಯರು ತಿಳಿಸಿದರು. ಮನೆ ಅಧಾರವಾಗಿದ್ದ ತನ್ನ ಮಗನ ಆರೋಗ್ಯದ ಹೆಚ್ಚಿನ ಚಿಕಿತ್ಸೆಗಾಗಿ ಅರ್ಥಿಕ ಸಮಸ್ಯೆ ಎದುರಾಯಿತು. ಆಸ್ಪತ್ರೆಗೆ ಖರ್ಚು ವೆಚ್ಚಕ್ಕೆ ಹಣಕಾಸು ಹೊಂದಿಸಲು ಸಾಧ್ಯವಿಲ್ಲದೆ ಕೊರಗುತ್ತಿದ್ದರು. ಈ ವಿಷಯ ತಿಳಿದ ಗೋವಿಂದೂರು ಯುವಕರ ತಂಡ ಅಭಿಲಾಷ್ ಮನೆಗೆ ಭೇಟಿ ನೀಡಿ ಅರ್ಥಿಕ ನಗದು ನೆರವು ನೀಡಿದರು. ಮಿತ್ರ ಬಳಗ ಗೋವಿಂದೂರು ಸಂಘದ ಗೌರವಾಧ್ಯಕ್ಷ ಉಮೇಶ್ ಗೋವಿಂದೂರು, ಅಧ್ಯಕ್ಷ ರೋಹಿತ್ ಗೋವಿಂದೂರು,ಉಪಾಧ್ಯಕ್ಷ ಸುರೇಶ್ ಪೆಂರ್ಬುಡ,ಕಾರ್ಯದರ್ಶಿ ರಾಜೇಶ್ ಗೌಡ ಕೆ,ಸಂದೀಪ್ ಗೌಡ ಕೋಜಂಬಲ, ಬಿ.ಜೆ. ಪ್ರಶಾಂತ್ ಪಾದೆ ಗುತ್ತು,ಪ್ರಶಾಂತ್ ಕರತ್ತೂರು,ಪುರುಷೋತ್ತಮ ಗೌಡ ಕೈಲಾಜೆ ಉಪಸ್ಥಿತರಿದ್ದರು.