ಕುವೆಟ್ಟು: ಕುವೆಟ್ಟು ಸ.ಉ.ಹಿ.ಪ್ರಾ.ಶಾಲೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿನ ಶಾಲಾ ಮಂತ್ರಿಮಂಡಲ ರಚನೆಯಾಯಿತು. ಶಾಲಾ ಮುಖ್ಯಮಂತ್ರಿಯಾಗಿ ರಾಯಿಷ 8ನೇ ತರಗತಿ, ಉಪ ಮುಖ್ಯಮಂತ್ರಿಯಾಗಿ ಬುಶ್ರಾ ಸುಲ್ತಾನ 7ನೇ ತರಗತಿ ಅವರು ಆಯ್ಕೆಯಾದರು.
ಕ್ರೀಡಾ ಮಂತ್ರಿಯಾಗಿ ಬಿಲಾಲ್ 8ನೇ ತರಗತಿ, ಉಪ ಕ್ರೀಡಾಮಂತ್ರಿಯಾಗಿ ಗಗನ್ 7ನೇ ತರಗತಿ, ಆರೋಗ್ಯ ಮಂತ್ರಿ ಖದೀಜಾ ಹಮ್ನಾ ಎಂಟನೇ ತರಗತಿ, ಉಪ ಆರೋಗ್ಯಮಂತ್ರಿಯಾಗಿ ದೀಕ್ಷಾ 7ನೇ ತರಗತಿ, ನೀರಾವರಿ ಮಂತ್ರಿ ಅಕ್ಷಿತ್ 7ನೇ ತರಗತಿ, ಉಪನೀರಾವರಿ ಮಂತ್ರಿ ಪ್ರಣಮ್ 7ನೇ ತರಗತಿ, ಸಾಂಸ್ಕೃತಿಕ ಮಂತ್ರಿ ಆಸಿಯ ರಿಫಾನ 8ನೇ ತರಗತಿ, ಉಪ ಸಾಂಸ್ಕೃತಿಕ ಮಂತ್ರಿ ಸ್ವಸ್ತಿಕಾ 7ನೇ ತರಗತಿ, ಶಿಕ್ಷಣ ಮಂತ್ರಿ ಐಫಾ 8ನೇ ತರಗತಿ, ಉಪ ಶಿಕ್ಷಣ ಮಂತ್ರಿ ಖತೀಜತ್ ಶೈಫಾ 7ನೇ ತರಗತಿ, ವಿರೋಧ ಪಕ್ಷದ ನಾಯಕಿ ಭವ್ಯಶ್ರೀ 8ನೇ ತರಗತಿ, ಉಪ ವಿರೋಧ ಪಕ್ಷದ ನಾಯಕನಾಗಿ ಕಾರ್ತಿಕ್ ವಿ ಮೂಲ್ಯ 7ನೇ ತರಗತಿ ಆಯ್ಕೆಯಾಗಿದ್ದಾರೆ.
ಶಾಲಾ ಮುಖ್ಯಶಿಕ್ಷಕ ಭಾಸ್ಕರ್ ಪ್ರಮಾಣ ವಚನ ಬೋಧಿಸಿದರು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸಿರಾಜ್ ಎಂ. ಚಿಲಿಂಬಿ ಶುಭ ಹಾರೈಸಿದರು. ಶಾಲಾ ಅಧ್ಯಾಪಕ ವೃಂದದವರು ಸಹಕರಿಸಿದರು.