ಬಳಂಜ: ಜೂ.26ರಂದು ಆನೆಪಿಲ ಪರಿಸರದಲ್ಲಿ ಬೀಸಿದ ಬಿರುಗಾಳಿಗೆ ಹಲವು ವಿದ್ಯುತ್ ಕಂಬಗಳು ತುಂಡಾಗಿ ಬಿದ್ದು, ಈ ಭಾಗದಲ್ಲಿ ಮೂರು ದಿವಸ ವಿದ್ಯುತ್ ಇರಲಿಲ್ಲ. ನಂತರ ಲೈನ್ ಮ್ಯಾನ್ ಗಳ ಶತ ಪ್ರಯತ್ನದಿಂದ ಈ ಭಾಗದಲ್ಲಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿದ್ದಾರೆ. ಇದಕ್ಕೆ ಶ್ರಮಿಸಿದಂತಹ ಲೈನ್ ಮ್ಯಾನ್ ಜಟ್ಟಿಂಗರಾಯ ಮತ್ತು ಅವರ ಸಿಬ್ಬಂದಿ ವರ್ಗ ಮತ್ತು ಮೇಲಾಧಿಕಾರಿ ಅವರಿಗೆ ಆನೆಪಿಲ ದೊಂಪದ ಬಲಿ ಸಮಿತಿ ಹಾಗೂ ಈ ಭಾಗದ ಎಲ್ಲಾ ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಬಳಂಜ: ಆನೆಪಿಲ ಪರಿಸರದಲ್ಲಿ ವಿದ್ಯುತ್ ಕಂಬಗಳು ಧರಶಾಯಿ-ಸರಿಪಡಿಸಿದ ಮೆಸ್ಕಾಂ ಇಲಾಖೆ- ಗ್ರಾಮಸ್ಥರಿಂದ ಅಭಿನಂದನೆ
