ರೆಖ್ಯ: ಗ್ರಾಮದ ಎಂಜಿರ, ನೇಲ್ಯಡ್ಕ, ಪರಕ್ಕಳದಲ್ಲಿ ಅವೈಜ್ಞಾನಿಕ ಕಾಮಗಾರಿ, ರೆಖ್ಯ ಗ್ರಾಮದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ( 75 ) ರ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದೆ. ಆದರೆ ರೆಖ್ಯ ಗ್ರಾಮದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ಮಾಡಿ ಜನರ ಜೀವ ಬಲಿಪಡೆಯುವಂತಾಗಿದೆ.
ಅವೈಜ್ಞಾನಿಕ ಕಾಮಗಾರಿಯ ವಿವರ: ಎಂಜಿರದಲ್ಲಿ ಸರ್ವಿಸ್ ರಸ್ತೆ ಮಾಡಿಲ್ಲ, ರಸ್ತೆ ಮದ್ಯದ ತಡೆಗೋಡೆಯಿಂದ ಶಾಲಾ ಮಕ್ಕಳು / ಸಾರ್ವಜನಿಕರು ರಸ್ತೆ ದಾಟಲು ಪರದಾಟ ಮಾಡುವಂತಾಗಿದೆ, ಕೋಳಾರು ಸಂಪರ್ಕ ರಸ್ತೆ ನೇಲ್ಯಡ್ಕದಲ್ಲಿ ಮುಖ್ಯ ರಸ್ತೆಗೆ ಸಂಪರ್ಕ ಮಾಡಿಲ್ಲ, ಅಗತ್ಯವಿದ್ದ ಕಡೆ ದಾರಿ ದೀಪ ಅಳವಡಿಸಿಲ್ಲ, ಅನಗತ್ಯ ಸ್ಥಳಗಳಲ್ಲಿ ಬಸ್ಸು ತಂಗುದಾಣ ನಿರ್ಮಾಣ ಮಾಡಿದ್ದಾರೆ. ಬೃಹತ್ ಗುಡ್ಡವಿರುವ ಸ್ಥಳಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಅವೈಜ್ಞಾನಿಕ ಕಾಮಗಾರಿಯ ವಿರುದ್ಧ ಗ್ರಾಮಸ್ಥರೆಲ್ಲರು ಒಟ್ಟಾಗಿ ಜು.1ರಂದು ಸಭೆ ನಡೆಸಿ, ಜು.5ರಂದು ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಪ್ರತಿಭಟನೆ ನಡೆಸುವ ದಿನಾಂಕ / ಸಮಯ ಮತ್ತು ಪ್ರತಿಭಟನೆಯ ರೂಪುರೇಷೆ ಪ್ರಕಟಿಸಲಾಗುವುದಾಗಿ ತೀರ್ಮಾನಿಸಲಾಗಿದೆ.