ನಾರಾವಿ: ಜೂ. 30ರಂದು ಪ್ರೌಢಶಾಲೆಯಲ್ಲಿ ಪೋಷಕರ ಸಭೆ ನಡೆಯಿತು. ಮುಖ್ಯ ಅತಿಥಿಗಳಾಗಿ ಡಾ. ಪ್ರಸಾದ್ ಅವರು ಆರೋಗ್ಯ ಮಾಹಿತಿ ನೀಡಿದರು. ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ವಸಂತ್ ಶೆಟ್ಟಿ ಅವರು ಪ್ರಧಾನ ಭಾಷಣಕಾರರಾಗಿ ಹೆತ್ತವರೊಂದಿಗೆ ಮಾತನಾಡಿದರು.
ಸಂಚಾಲಕ ಜೆರೋಮ್ ಡಿಸೋಜಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ತುಳುಪುಳೆ ಸ್ವಾಗತಿಸಿದರು. ಶಿಕ್ಷಕಿ ಸ್ನೇಹಲತಾ ಎಸ್.ಎಸ್.ಎಲ್.ಸಿ ಸಾಧಕರ ಅಭಿನಂದನಾ ಕಾರ್ಯ ನಿರ್ವಹಣೆ ಮಾಡಿದರು. ಪ್ರತೀ ಮಗುವಿನ ಪೋಷಕರಿಗೆ ಒಂದೊಂದು ಗಿಡವನ್ನು ವಿತರಿಸಲಾಯಿತು. ಶಿಕ್ಷಕ ಜಾನ್ಸನ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಸುಜಾತಾ ವಂದಿಸಿದರು.