ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಎನ್. ಡಿ. ಎ ತರಗತಿಗಳ ಓರಿಯಂಟೇಶನ್ ವಿದ್ಯಾ ಸಾಗರ ಕ್ಯಾಂಪಸ್ ನಲ್ಲಿ ನಡೆಯಿತು. ಭಾರತೀಯ ಸೇನೆಯ ವಿಶ್ರಾಂತ ಮೇಜರ್ ಜನರಲ್ ಎಂ.ವಿ.ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡರು.
ಯಾವುದೇ ಸಾಧನೆ ಮಾಡಲು ಏಕಾಗ್ರತೆ ಬೇಕು. ಏಕಾಗ್ರತೆ ಹಾಗೂ ಇಚ್ಛಾ ಶಕ್ತಿ ಸಾಧಕ ನಿಗಿರಬೇಕಾದ ಎರಡು ಪ್ರಮುಖ ಅರ್ಹತೆಗಳು. ಎಂದು ಭಾರತೀಯ ಸೇನೆಯ ವಿಶ್ರಾಂತ ಜನರಲ್ ಮೇಜರ್ ಎಂ.ವಿ. ಭಟ್ ಹೇಳಿದರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ಮಾತನಾಡಿ, ದೇಶ ಸೇವೆ ಮಾಡುವ ಉನ್ನತ ಮಟ್ಟದ ಅವಕಾಶ, ಎನ್. ಡಿ. ಎ. ಕ್ಲಿಯರ್ ಮಾಡಿದ ವಿದ್ಯಾರ್ಥಿಗಳಿಗೆ ಲಭಿಸುತ್ತದೆ. ಹೀಗಾಗಿ ಎನ್. ಡಿ. ಎ ಪರೀಕ್ಷೆಗಳನ್ನು ಗಂಭೀರವಾಗಿ ಸ್ವೀಕರಿಸಿ ಎಂದರು.
ಪ್ರಾಂಶುಪಾಲ ನವೀನ್ ಕುಮಾರ್ ಮರಿಕೆ ಮಾತನಾಡಿ, ದೇಶ ಸೇವೆಯೇ ಈಶ ಸೇವೆ ಎಂದು ತಿಳಿದು, ಬದುಕಲು ಎನ್. ಡಿ. ಎ ತರಬೇತಿ ಅವಕಾಶ ಮಾಡಿಕೊಡುತ್ತದೆ ಎಂದು ಹೇಳಿದರು.
ಎನ್. ಡಿ. ಎ ಸಂಯೋಜಕ ಜೋಸ್ಟಮ್ ಎ. ಟಿ., ಎನ್. ಡಿ. ಎ ತರಬೇತಿಯ ಬಗ್ಗೆ ವಿವರವಾಗಿ ತಿಳಿಸಿದರು. ವಿದ್ಯಾರ್ಥಿಗಳಾದ ವರ್ಷಾ ಎನ್. ಸ್ವಾಗತಿಸಿದರು. ರಕ್ಷಾ ವೆಂಕಟ್ ಮತ್ತು ರೀತು ಕೆ.
ನಿರೂಪಿಸಿದರು. ಸುಧನ್ವ ವಂದಿಸಿದರು.